Bangalore | ಕೆ.ಪಿ.ಟಿ.ಸಿ.ಎಲ್.ಹೈಟೆನ್ಷನ್ ಲೈನ್ ತೆರವುಗೊಳಿಸುವ ಕಾಮಗಾರಿಗೆ ಚಾಲನೆ
ಬೆಂಗಳೂರು : ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಡಾ||ರಾಜ್ ಕುಮಾರ್ ವಾರ್ಡ್ ನ ಡಾ||ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಭೂಗತ ಕೇಬಲ್ ಆಗಿ ಬದಲಾವಣೆಗೊಂಡಿರುವ ಕೆ.ಪಿ.ಟಿ.ಸಿ.ಎಲ್.ಹೈಟೆನ್ಷನ್ ಲೈನ್ ನನ್ನು ತೆರವುಗೊಳಿಸುವ ಕಾಮಗಾರಿ ಪೂಜೆಯನ್ನು ದೀಪಾ ಬೆಳಗಿಸಿ ವಸತಿ ಸಚಿವರಾದ ವಿ.ಸೋಮಣ್ಣರವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ವಸತಿ ಸಚಿವ ವಿ.ಸೋಮಣ್ಣ, ಸರ್ಕಾರದ ಯೋಜನೆಗಳು ಯಶ್ವಸಿಯಾಗಲು ಅಧಿಕಾರಿಗಳು ಮತ್ತು ಜನರ ಸಹಕಾರ ಮುಖ್ಯ. ಶ್ರೀ ಶಿವಕುಮಾರ ಸ್ವಾಮೀಜಿ ,ಬಾಲಗಂಗಾಧರ ಸ್ವಾಮೀಜಿರವರ ಆಶೀರ್ವಾದದಿಂದ ಅಭಿವೃದ್ದಿ ಕೆಲಸ ಮಾಡಲಾಗುತ್ತಿದೆ.
ಜನರ ಸಹಕಾರದಿಂದ 3ವರ್ಷದಲ್ಲಿ ನೂರಾರು ಅಭಿವೃದ್ದಿ ಕೆಲಸವಾಗಿದೆ. ಸುಮಾರು 2ಕೋಟಿ ವೆಚ್ಚದಲ್ಲಿ ಎಸ್.ಟಿ.ಪಿ.ಪ್ಲಾಂಟ್ ನಿರ್ಮಾಣ ಮತ್ತು 57ದೇವಾಲಯಗಳ ನವೀಕರಣ,ಜೀರ್ಣೋದ್ದಾರ ಮತ್ತು ಖಾಸಗಿ ಶಾಲೆಗೆ ಪೈಪೋಟಿ ನೀಡುವಂತೆ ಮಾನಸನಗರದಲ್ಲಿ 2000ಸಾವಿರ ಮಕ್ಕಳ ಪ್ರವೇಶಾವಕಾಶ ಇರುವ ಶಾಲೆ ಆರಂಭವಾಗಲಿದೆ.
45ಉದ್ಯಾನವನ ,24ಬ್ಯಾಡ್ಮಿಂಟನ್ ಕೋರ್ಟ್ ಗಳು ಪ್ರತಿ ವಾರ್ಡ್ ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸುಮಾರು 12ಕೋಟಿ ವೆಚ್ಚದಲ್ಲಿ ಕನಕ ಭವನ ನಿರ್ಮಾಣ 250ವಿದ್ಯಾರ್ಥಿಗಳ ಉಳಿದುಕೊಳ್ಳುವ ಪಿ.ಜಿ.ಸೆಂಟರ್ ಹಾಗೂ ಐ.ಎ.ಎಸ್.ಮತ್ತು ಐ.ಆರ್.ಎಸ್.ತರಬೇತಿ ಕೇಂದ್ರ, ಉಚಿತ ಡಯಾಲಿಸಿಸ್ ಕೇಂದ್ರ .
ದಾಸರಹಳ್ಳಿ ವಾರ್ಡ್ ನಲ್ಲಿ 200ಹಾಸಿಗೆ ಸಾಮ್ಯರ್ಥದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಪಂತರಪಾಳ್ಯದಲ್ಲಿ ಹೈಟೆಕ್ ಆಸ್ಪತ್ರೆ ಮತ್ತು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರು ,ಒಳಚರಂಡಿ ರಸ್ತೆಗಳು ಸುವ್ಯವಸ್ಥಿತವಾದ ಮಾದರಿ ವಿಧಾನಸಭಾ ಕ್ಷೇತ್ರವಾಗಿದೆ ಎಂದು ಹೇಳಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಲು ಪಣ ತೊಟ್ಟಿದ್ದೇನೆ. ಅದಕ್ಕೆ ತಕ್ಕಂತೆ ಕ್ಷೇತ್ರದಾದ್ಯಂತ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ.
ಶಾಶ್ವತವಾದ ಕುಡಿಯುವ ನೀರು ಸೇರಿದಂತೆ ಕ್ಷೇತ್ರದಲ್ಲಿ ಮೂಲಸೌಲಭ್ಯಕ್ಕೆ ಒತ್ತು ನೀಡಲಾಗಿದೆ.
ಕ್ಷೇತ್ರದ ಜನರಿಗೆ ಜಾತ್ಯಾತೀತವಾಗಿ ಸೇವೆ ಮಾಡಿದ ನೆಮ್ಮದಿ ಇದೆ. ಇನ್ನೊಬ್ಬರ ಮನಸ್ಸು ನೋಯಿಸಿ ರಾಜಕಾರಣ ಮಾಡಿಲ್ಲ. ಜನತೆ ನೀಡಿದ ಅಮೂಲ್ಯ ಮತಕ್ಕೆ ಅಳಿಲು ಸೇವೆ ಸಲ್ಲಿಸಿದ್ದೇನೆ.
ಗೋವಿಂದರಾಜನಗರ ಕ್ಷೇತ್ರ ವ್ಯಾಪ್ತಿಯ ರಾಜಾಜಿನಗರ ಆರನೇ ಬ್ಲಾಕ್, ಕೈಗಾರಿಕಾ ಪ್ರದೇಶ, ಬಸವೇಶ್ವರ ನಗರ, ಡಾ.ಬಿ.ಆರ್.ಅಂಬೇಡ್ಕರ್ ಆಟದ ಮೈದಾನ, ಬಿ.ಆರ್.ಐ.ಕಾಲೋನಿ, ಅಗ್ರಹಾರ ದಾಸರಹಳ್ಳಿ, ಗೋವಿಂದರಾಜನಗರ, ಮಾರೇನಹಳ್ಳಿ, ಎಂ.ಸಿ.ಬಡಾವಣೆ, ಮಾರುತಿ ಮಂದಿರ, ಸುಬ್ಬಣ್ಣ ಗಾರ್ಡನ್, ಚಂದ್ರಾ ಬಡಾವಣೆ ಮತ್ತು ಗಂಗೊಂಡನಹಳ್ಳಿ ಮೂಲಕ ಹಾದು ಹೋಗುತ್ತಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ 66 ಕೆ.ವಿ. ಹೆಚ್.ಟಿ. ಮಾರ್ಗದಿಂದಾಗಿ ಅನೇಕ ಅವಘಡಗಳು ಸಂಭವಿಸುತ್ತಿದ್ದವು. ಇದರಿಂದ ಹಲವು ನಾಗರಿಕರು ತೊಂದರೆಯನ್ನನುಭವಿಸುತ್ತಿದ್ದರು. ಈ ತೊಂದರೆಯನ್ನು ನಿವಾರಿಸುವ ಸಲುವಾಗಿ ಕಳೆದ ಅಗಸ್ಟ್ ನಲ್ಲಿ ಸುಮಾರು 5.5 ಕಿ.ಮೀ. ಉದ್ದದ ಭೂಗತ ಕೇಬಲ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಇಂದು ಭೂಗತ ಕೇಬಲ್ ಆಗಿ ಬದಲಾವಣೆಗೊಂಡಿರುವ ಕೆ.ಪಿ.ಟಿ.ಸಿ.ಎಲ್. ನ ಹೈಟೆನ್ಷನ್ ಲೈನ್ ನ್ನು ತೆರವುಗೊಳಿಸುವ ಕಾಮಗಾರಿ ಪೂಜೆ ಕೈಗೊಂಡಿರುವುದು ಸಂತಸ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಬಿ.ಬಿ.ಎಂ.ಪಿ.ವಿಶೇಷ ಆಯುಕ್ತರಾದ ದೀಪಕ್ಅಧಿಕಾರಿಗಳು ಮತ್ತು ಜಂಟಿ ಆಯುಕ್ತರಾದ ಶ್ರೀನಿವಾಸ್ ,ಕೆ.ಪಿ.ಟಿ.ಸಿ.ಎಲ್.ಮುಖ್ಯ ಅಭಿಯಂತರಾದ ಜಯಕುಮಾರ್, ಗೋವಿಂದರಾಜನಗರ ಮಂಡಲ ಬಿ.ಜೆ.ಪಿ.ಅಧ್ಯಕ್ಷರಾದ ವಿಶ್ವನಾಥಗೌಡ , ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ರೂಪಲಿಂಗೇಶ್ವರ್. ಗಂಗಭೈರಯ್ಯ,ಕೆ.ಉಮೇಶ್ ಶೆಟ್ಟಿ,ಮೋಹನ್ ಕುಮಾರ್,ವಾಗೇಶ್,ಶಿಲ್ಪ ಶ್ರೀಧರ್, ಪಲ್ಲವಿ ಸೇರಿದಂತೆ ಸ್ಥಳೀಯರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.









