bangalore “ಲಾಕ್ ಡೌನ್ ಮಾಡಲ್ಲ, ಕಠಿಣ ನಿಯಮ ಪಕ್ಕಾ”
ಬೆಂಗಳೂರು : ನಗರದಲ್ಲಿ ಲಾಕ್ ಡೌನ್ ಮಾಡಲ್ಲ, ಕಠಿಣ ನಿಯಮ ಪಕ್ಕಾ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಜೀವ ಉಳಿಸುವುದು ಸರ್ಕಾರದ ಮೊದಲ ಕರ್ತವ್ಯ. ಕೊರೊನಾ ವೇಳೆ ವಿತಂಡವಾದ ಸರಿಯಲ್ಲ.
ಕೆಲವು ಚಟುವಟಿಕೆಗಳಿಗೆ ಕಡಿವಾಣ ಹಾಕಲೇಬೇಕಾಗುತ್ತೆ. ಸಿಎಂ ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸ್ತಾರೆ. ಲಾಕ್ ಡೌನ್ ಬಗ್ಗೆ ಬಹಳ ಪ್ರಚಾರ ಆಗ್ತಿದೆ.
ಲಾಕ್ ಡೌನ್ ಒಂದೇ ಪರಿಹಾರ ಅಲ್ಲ. ಆದರೆ ಬಿಗಿಯಾದ ಕ್ರಮಗಳು ಆಗಬೇಕು, ಆ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದರು.
ನಾಳೆ ಸರ್ವಪಕ್ಷ ಸಭೆಗಳ ನಾಯಕರ ಜೊತೆಯೂ ಚರ್ಚೆ ಮಾಡುತ್ತಾರೆ. ನಾಳೆ ಸಿಎಂ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸ್ತಾರೆ.
ಇಂದೇ ಬೆಂಗಳೂರಿಗೆ ಸಂಬಂಧಪಟ್ಟಂತೆ ರೂಲ್ಸ್ ಆಗಬಹುದು. ಇಲ್ಲ ನಾಳೆ ಸರ್ವಪಕ್ಷ ನಾಯಕರ ಜೊತೆ ಚರ್ಚೆ ಮಾಡಿ ನಾಳೆಯೇ ರೂಲ್ಸ್ ಬರಬಹುದು ಎಂದು ಸುಧಾಕರ್ ತಿಳಿಸಿದ್ದಾರೆ.









