ಹಣ ಡಬ್ಲಿಂಗ್ ಆಮಿಷ, 20 ಕೋಟಿ ಪಂಗನಾಮ: ಸಿಐಡಿ ತನಿಖೆಗೆ ಆಗ್ರಹಿಸಿ ಪ್ರತಿಭಟನೆ
ಬೆಂಗಳೂರು : ನಗರದ ಗಿರಿನಗರ ಪೊಲೀಸ್ ಠಾಣೆ ಹೊಸಕೆರೆಹಳ್ಳಿ ವ್ಯಾಪ್ತಿಯಲ್ಲಿ ಹಣ ಡಬ್ಲಿಂಗ್ ಮಾಡಿಕೊಡುವುದಾಗಿ ನೂರಾರು ಜನರಿಗೆ ನಂಬಿಸಿ ಸುಮಾರು 20 ಕೋಟಿ ರೂ. ವಂಚನೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವಂತೆ ಆಗ್ರಹಿಸಿ ವಂಚನೆಗೆ ಒಳಗಾದವರು ಇಂದು ಫ್ರೀಡಂಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದರು.

ಗಿರಿನಗರದ ವಂಚಕ ದಂಪತಿ ಜ್ಞಾನೇಶ್-ಲೀಲಾವತಿ ಹಾಗೂ ಅವರ ಮಗ ಮನೋಜ್ ಚೀಟಿ, ಷೇರು ಬಂಡವಾಳ ಹೂಡಿಕೆ ಮಾಡಿ ಹಣ ಡಬ್ಬಲ್ ಮಾಡಿಕೊಡುವುದಾಗಿ ನಂಬಿಸಿ ಬರೋಬ್ಬರಿ 900 ಜನರಿಂದ ಸುಮಾರು 20 ಕೋಟಿ ರೂ. ಹಣ ಪಡೆದು ವಂಚಿಸಿದ್ದಾರೆ.
ಪಂಡಿತ್ ದೈವಜ್ಞ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564
ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564
ಕೋಟಿ ಕೋಟಿ ವಂಚನೆ ಪ್ರಕರಣದಲ್ಲಿ ಜ್ಞಾನೇಶ್-ಲೀಲಾವತಿ ಹಾಗೂ ಅವರ ಮಗ ಮನೋಜ್ ನ್ನು ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಜತೆಗೆ ಜ್ಞಾನೇಶ್-ಲೀಲಾವತಿ ಪುತ್ರಿ ಮೇಘನಾ ಹಾಗೂ ಅಳಿಯ ರವಿಕುಮಾರ್ ಕೂಡ ವಂಚನೆಯಲ್ಲಿ ಭಾಗಿಯಾಗಿದ್ದಾರೆ. ಅಳಿಯ ರವಿಕುಮಾರ್ ಹನುಮಂತ ನಗರ ಠಾಣೆಯಲ್ಲಿ ರೈಟರ್. ಹೀಗಾಗಿ ಆತ ತನಿಖೆ ಮೇಲೆ ಪ್ರಭಾವ ಬೀರುತ್ತಿದ್ದಾನೆ. ಮಗಳು ಮೇಘನಾ, ಅಳಿಯ ರವಿಕುಮಾರ್ ನನ್ನು ಬಂಧಿಸಿ, ಪ್ರಕರಣ ತನಿಖೆಯನ್ನು ಸಿಐಡಿ ಒಪ್ಪಿಸುವಂತೆ ಹಣ ಕಳೆದುಕೊಂಡವರು ಕಣ್ಣೀರಿಡುತ್ತಿದ್ದಾರೆ.
ಅಂದಹಾಗೆ ಆ ಐನಾತಿ ಜ್ಞಾನೇಶ್-ಲೀಲಾವತಿ ದಂಪತಿ ಮಿಡಲ್ ಕ್ಲಾಸ್ ಜನರನ್ನೇ ಟಾರ್ಗೆಟ್ ಮಾಡಿಕೊಳ್ಳುತ್ತಿದ್ದರು. ದಂಪತಿಯ ಹೆಚ್ಚುವರಿ ಬಡ್ಡಿ ಆಸೆಗೆ ಈಗ ನೂರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಪತ್ನಿಗೆ ಹೇಳದಂತೆ ಪತಿ ಹೂಡಿಕೆ ಮಾಡಿದ್ದರೆ, ಪತಿಗೆ ಗೊತ್ತಾಗದಂತೆ ಪತ್ನಿಯಿಂದ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದ ಐನಾತಿಗಳು, ಸುಮಾರು 900ಕ್ಕೂ ಹೆಚ್ಚು ಜನರಿಗೆ ವಂಚಿಸಿದ್ದಾರೆ.
ಮೃತ ಗಂಡನಿಗೆ ಬಂದಿದ್ದ ಹಣವನ್ನು ಮಂಜುಳಾ ಎಂಬುವರು ಒಟ್ಟು 20 ಲಕ್ಷ ಹಣ ಹೂಡಿ ಯಾಮಾರಿದ್ದಾರೆ. ಈಗ
ಮಗಳ ಮದುವೆಗೆ ಹಣವಿಲ್ಲದೇ ಪರದಾಡುತ್ತಿದ್ದು, ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.
ಅದೇ ರೀತಿ ನಿವೃತ್ತ ಕೆಎಸ್ ಆರ್ ಟಿಸಿ ಚಾಲಕನಿಗೂ ಜ್ಞಾನೇಶ್-ಲೀಲಾವತಿ ದೋಖಾ ಮಾಡಿದ್ದಾರೆ. ಮನೆ ಖರೀದಿ ಆಸೆಗೆ ಒಟ್ಟು 50 ಲಕ್ಷ ಹಣ ಹೂಡಿಕೆ ಮಾಡಿದ್ದ ಚಾಲಕ ನಾರಾಯಣ್ ಗೆ ಈಗ ದಿಕ್ಕು ತೋಚದಂತಾಗಿದೆ.
ಎಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.
ಇನ್ನು ಹಣ ಕೇಳಲು ಹೋದ ಜನರ ಮೇಲೆ ಈ ಐನಾತಿ ದಂಪತಿಗಳು ಹಲ್ಲೆ ಮಾಡಿದ್ದಾರೆ. ಅಲ್ಲದೆ ನನ್ನ ಅಳಿಯ ಪೊಲೀಸ್. ಅವರಿಗೆ ಹೇಳಿ ನಿಮ್ಮ ಮೇಲೆಯೇ ಕೇಸ್ ಹಾಕಿಸುತ್ತೇವೆ ಅಂತಾ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಜ್ಞಾನೇಶ್ – ಲೀಲಾವತಿ ಮತ್ತು ಮನೋಶ್ ವಿದೇಶಕ್ಕೆ ಹಾರಲು ಪ್ಲಾನ್ ಮಾಡಿಕೊಂಡಿದ್ದಾರೆ. ಈಗಾಗಲೇ ಇವರಿಗೆ ಯಾವುದೇ ಕಾರಣಕ್ಕೂ ಬೇಲ್ ಮಂಜೂರು ಮಾಡಬಾರದು ಎಂದು ಮಂಜುನಾಥ್, ಶರಣಪ್ಪ ಎಂಬುವವರು ಒತ್ತಾಯಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









