Night curfew ರಾತ್ರಿ ಕರ್ಫ್ಯೂ | ಯಾರು ಕೂಡ ಅನಾವಶ್ಯಕವಾಗಿ ಓಡಾಟ ನಡೆಸುವಂತಿಲ್ಲ : ಕಮಲ್ ಪಂತ್
ಬೆಂಗಳೂರು : ಇಂದಿನಿಂದ ರಾತ್ರಿ ಕರ್ಫ್ಯೂ ಜಾರಿ ಹಿನ್ನಲೆ , ಯಾರು ಕೂಡ ಅನಾವಶ್ಯಕವಾಗಿ ಓಡಾಟ ನಡೆಸುವಂತಿಲ್ಲ.
ಒಂದು ವೇಳೆ ಯಾರಾದ್ರು ಅನಗತ್ಯವಾಗಿ ಓಡಾಡೋರಿಗೆ ಕಠಿಣ ಕ್ರಮ ಕೈ ಗೊಳ್ಳಲಾಗುತ್ತೆ.
ಯಾರು ಕೂಡ ಬೇಕಾ ಬಿಟ್ಟಿಯಾಗಿ ಓಡಾಡ ಬಾರ್ದು ಎಂದು ಬೆಂಗಳೂರು ಪೊಲೀಷ್ ಕಮಿಷನರ್ ಎಚ್ಚರಿಕೆ ನೀಡಿದ್ದಾರೆ.
ನಮ್ಮ ಪೊಲೀಸರು ಬಂದೊಬಸ್ತ್ ಗೆ ಸಿದ್ದರಾಗಿದ್ದಾರೆ. ನಗರದ ಎಲ್ಲಾ ಫ್ಲೈ ಓವರ್ ಗಳು ಮುಚ್ಚಾಲಾಗುತ್ತೆ.
ರಸ್ತೆಗೆ ಯಾರು ಅನಾವಶ್ಯಕವಾಗಿ ಬರಬಾರ್ದು. ತರಕಾರಿ ತುರ್ತು ಸೇವೆ ಹಾಲು ಪೇಪರ್ ವಾಹನಗಳಿಗೆ ಯಾವುದೇ ಸಮಸ್ಯೆಯಿಲ್ಲ.
ಅಗತ್ಯ ಸೇವೆಗಳಿಗೆ ಅನುಮತಿ ನೀಡಲಾಗಿದೆ. ಯಾವುದೇ ರೀತಿಯ ಪಾಸ್ ಗಳನ್ನ ವಿತರಣೆ ಮಾಡ್ತಾಯಿಲ್ಲ, ಪಾಸ್ ಕೊಡಲ್ಲ.
ರಾತ್ರಿ 9 ಗಂಟೆಯಿಂದ ಪೊಲೀಸರ ನಿಯೋಜನೆ ಮಾಡಲಾಗುತ್ತೆ. 9 ಗಂಟೆಗೆ ಮುಚ್ಚಿದ್ರೆ ಅಷ್ಟೇ ಹತ್ತು ಗಂಟೆಗೆ ಹೋಗೋದಕ್ಕೆ ಆಗುತ್ತೆ.
9 ಗಂಟೆಗೆ ಅಂಗಡಿ ಮುಂಗಟ್ಟುಗಳನ್ನ ಮುಚ್ಚುವುದಕ್ಕೆ ಸೂಚನೆ ಕೊಡಲಾಗುತ್ತೆ. ಯಾವುದೇ ಕಾರಣಕ್ಕು ಹೊರಗಡೆ ಬರೋ ಹಾಗಿಲ್ಲ.
ಅಗತ್ಯ ಸರ್ವಿಸ್ ಗಳಿಗೆ ಅವಕಾಶ ಇರುತ್ತೆ. ಪಾಸ್ ಸರ್ವೀಸ್ ಯಾರಿಗೂ ಇಲ್ಲ ಎಂದಿದ್ದಾರೆ.