ರಾಜಧಾನಿಯಲ್ಲಿ ಸದ್ದು ಮಾಡಿದ ಪೊಲೀಸ್ ಪಿಸ್ತೂಲ್ : ರೌಡಿಶೀಟರ್ ಕಾಲಿಗೆ ಗುಂಡು bangalore saaksha tv
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂಬೆಳಿಗ್ಗೆ ಖಾಕಿ ಪಿಸ್ತೂಲ್ ಸದ್ದು ಮಾಡಿದೆ. ಇಂದು ಮುಂಜಾನೆ ಸಂಜಯ್ ನಗರ ಠಾಣಾ ಪೊಲೀಸರು ಕುಖ್ಯಾತ ರೌಡಿಶೀಟರ್ ಅವಿನಾಶ್ ಕಾಲಿಗೆ ಗುಂಡು ಹಾರಿಸಿದ್ದಾರೆ.
ರೌಡಿಶೀಟರ್ ಅವಿನಾಶ್ ರಾಮಮೂರ್ತಿ ನಗರದ ನಿವಾಸಿಯಾಗಿದ್ದು, ಸಂಜಯ್ ನಗರ ಪೆÇಲೀಸ್ ಠಾಣೆ ಸಿಬ್ಬಂದಿ ಸಂತೋಷ್ ಎಂಬುವರ ಮೇಲೆ ಹಲ್ಲೆ ನೆಡೆಸಿದ್ದ.
ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸುವ ಕಾರ್ಯಚರಣಯಲ್ಲಿ ಅವಿನಾಶ್ ಕಾಲಿಗೆ ಗುಂಡು ಹಾರಿಸಲಾಗಿದೆ. ಸಂಜಯ್ ನಗರ ಠಾಣೆ ಇನ್ಸ್ ಪೆಕ್ಟರ್ ಬಾಲ್ ರಾಜ್ ನೇತೃತ್ವದಲ್ಲಿ ಈ ಕಾರ್ಯಚರಣೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.
ಅಂದಹಾಗೆ ಅವಿನಾಶ್ ಅಂಡ್ ಗ್ಯಾಂಗ್ ಈ ಹಿಂದೆ ಮುನಿರಾಜು ಎಂಬಾತ ತನ್ನ ಹೆಂಡತಿ ಮಗುವಿನೊಂದಿಗೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ತೆರಳುತ್ತಿದ್ದಾಗ ಹಲ್ಲೆ ಮಾಡಿದ್ದರು. ಈ ಬಗ್ಗೆ ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









