Bangalore | ನಾಳೆಯಿಂದ ಹಾಲು ಉತ್ಪನ್ನಗಳ ಬೆಲೆ ಏರಿಕೆ
ಬೆಂಗಳೂರು : ಕೊರೊನಾ ಸೋಂಕಿನ ಕಾಟ, ಬೆಲೆ ಏರಿಕೆಯಿಂದ ಬರ್ಬಾದ್ ಆಗಿರುವ ಜನರಿಗೆ ಮತ್ತೊಂದು ಆಘಾತ ಎದುರಾಗಳಿದೆ.
ನಾಳೆಯಿಂದ ಹಾಲು ಉತ್ಪನ್ನಗಳ ಬೆಲೆ ಏರಿಕೆಯಾಗಲಿದ್ದು, ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕೇಂದ್ರ ಸರ್ಕಾರದಿಂದ ಮೊಸರು, ಮಜ್ಜಿಗೆ ಮತ್ತು ಲಸ್ಸಿ ಮೇಲೆ ಶೇಕಡಾ 5 ರಷ್ಟು ಜಿಎಸ್ ಟಿ ವಿಧಿಸಿದ ಕಾರಣ ನಾಳೆಯಿಂದ ಹೊಸ ದರದಲ್ಲಿ ನಂದಿನಿ ಉತ್ಪನ್ನಗಳ ಮಾರಾಟವಾಗಲಿದೆ.
ನಾಳೆಯಿಂದ 1 ರಿಂದ 3 ರೂಪಾಯಿ ವರೆಗೆ ಬೆಲೆ ಏರಿಕೆಯಾಗಲಿದೆ. ಆದ್ರೆ ಹಾಲಿನ ದರದಲ್ಲಿ ಯಾವುದೇ ಬದಲಾವಣೆ ಇಲ್ಲ.
ಮೊಸರು ಲೀಟರ್ ಗೆ 43 ಇದ್ದದ್ದು 46 ರೂ, ಅರ್ಧ ಲೀಟರ್ ಮೊಸರಿಗೆ 22 ಇದ್ದದ್ದು-24 ಕ್ಕೆ, ಮಜ್ಜಿಗೆ 200 ಎಂಎಲ್ ಪ್ಯಾಕೆಟ್ ಬೆಲೆ ಮೇಲೆ 1 ರೂ ಏರಿಕೆ, ಲಸ್ಸಿ ಬೆಲೆಯೂ ಸಹ ಒಂದು ರೂ ಏರಿಕೆ, ನಾಳೆಯಿಂದ ಹೊಸ ದರದಲ್ಲಿ ಮೊಸರು, ಮಜ್ಜಗೆ, ಲಸ್ಸಿ ಮಾರಾಟವಾಗಲಿದೆ.
ಪ್ಯಾಕೇಟ್ ಮೇಲೆ ಹಳೆಯ ದರವೇ ಇರಲಿದ್ದು, ಗ್ರಾಹಕರು ಹೊಸ ದರವನ್ನ ನೀಡುವಂತೆ ಕೆ ಎಂಎಫ್ ಸೂಚನೆ ನೀಡಿದೆ.