Bangladesh accident – ಮಿನಿ ಬಸ್ ಗೆ ರೈಲು ಡಿಕ್ಕಿ 11 ಮಂದಿ ಸ್ಥಳದಲ್ಲೇ ಸಾವು
ಹಳಿ ದಾಟುತ್ತಿದ್ದ ಬಸ್‌ಗೆ ರೈಲು ಡಿಕ್ಕಿ ಹೊಡೆದ ಪರಿಣಾಮ 11 ಮಂದಿ ಸಾವನ್ನಪ್ಪಿರುವು ದುರಂತ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ.
ಅಮನ್ ಬಜಾರ್ ಪ್ರದೇಶದ ಕೋಚಿಂಗ್ ಸೆಂಟರ್‌ನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮಿನಿ ಬಸ್‌ನಲ್ಲಿ ಕೊಯಾಚೋರೊ ಎಂಬ ಜಲಪಾತವನ್ನು ವೀಕ್ಷಿಸಲು ತೆರಳಿ, ವಾಪಸಾಗುವಾಗ ಚಟ್ಟೋಗ್ರಾಮ್ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ಈ ದುರಂತ ಸಂಭವಿಸಿದೆ.
ರೈಲ್ವೆ ಕ್ರಾಸಿಂಗ್ ಬಳಿ ಗೇಟ್ ಹಾಕದ ಹಳಿದಾಟುತ್ತಿದ್ದ ಮಿನಿ ಬಸ್ ಗೆ ವೇಗವಾಗಿ ಬಂದ ಎಕ್ಸ್‌ಪ್ರೆಸ್ ರೈಲು ಬಸ್‌ಗೆ ಡಿಕ್ಕಿ ಹೊಡೆದು ಒಂದು ಕಿಲೋಮೀಟರ್ ದೂರದವರೆಗೆ ರೈಲು ಮಿನಿ ಬಸ್ ಅನ್ನು ಎಳೆದೊಯ್ದಿದೆ. ಈ ಘಟನೆಯಲ್ಲಿ ಬಸ್ಸಿನಲ್ಲಿದ್ದ 11 ಮಂದಿ ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ.
ಮೃತರಲ್ಲಿ ನಾಲ್ವರು ಶಿಕ್ಷಕರು, 10 ವಿದ್ಯಾರ್ಥಿಗಳು ಹಾಗೂ ಓರ್ವ ಚಾಲಕ ಸೇರಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಅಧಿಕಾರಿಗಳು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಶುಕ್ರವಾರ ಸಂಜೆ, ಘಟನೆಯಲ್ಲಿ ಕ್ರಾಸಿಂಗ್‌ನ ಗೇಟ್‌ಮ್ಯಾನ್ ಸದ್ದಾಂ ಹೊಸೈನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಚಿತ್ತಗಾಂಗ್ ರೈಲ್ವೆ ಪೊಲೀಸ್ ಠಾಣೆಯ ಒಸಿ ಎಂಡಿ ನಜೀಮ್ ಉದ್ದೀನ್ ಹೇಳಿದ್ದಾರೆ.








