ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತದಲ್ಲಿ ಆಡುವುದಿಲ್ಲ ಎಂಬ ತನ್ನ ನಿಲುವನ್ನು ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ (BCB) ಮತ್ತೊಮ್ಮೆ ಸ್ಪಷ್ಟವಾಗಿ ತಿಳಿಸಿದೆ. ಆಟಗಾರರ ಸುರಕ್ಷತೆ ಪ್ರಮುಖ ಕಾರಣವಾಗಿದ್ದು, ಪಂದ್ಯಗಳನ್ನು ಬೇರೆ ದೇಶದಲ್ಲಿ ನಡೆಸಬೇಕು ಎಂದು ICCಗೆ ಬಾಂಗ್ಲಾದೇಶ ಅಧಿಕೃತವಾಗಿ ವಿನಂತಿಸಿದೆ.
ಈ ಸಂಬಂಧ ICC ಮತ್ತು BCB ನಡುವೆ ವರ್ಚುವಲ್ ಸಭೆ ನಡೆಯಿತು. ಸಭೆಯಲ್ಲಿ ಪಂದ್ಯಾವಳಿ ವೇಳಾಪಟ್ಟಿ ಹಾಗೂ ಟ್ರಾವೆಲ್ ಪ್ಲಾನ್ ಈಗಾಗಲೇ ಅಂತಿಮಗೊಂಡಿದೆ ಎಂದು ICC ತಿಳಿಸಿದೆ. ಜೊತೆಗೆ, ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಬಾಂಗ್ಲಾದೇಶವನ್ನು ಮನವಿ ಮಾಡಲಾಗಿದೆ.
ಆದರೆ, ಭಾರತದಲ್ಲಿ ಆಡುವ ವಿಚಾರಕ್ಕೆ BCB ಯಾವುದೇ ರೀತಿಯ ಒಪ್ಪಿಗೆ ಸೂಚಿಸಿಲ್ಲ. ಆಟಗಾರರ ಭದ್ರತೆ ಹಾಗೂ ತಂಡದ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟು ತಮ್ಮ ನಿರ್ಧಾರದಲ್ಲಿ ಬದಲಾವಣೆ ಸಾಧ್ಯವಿಲ್ಲ ಎಂದು ಬಾಂಗ್ಲಾ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ.
ಈ ಹಿನ್ನೆಲೆಯಲ್ಲಿ ವಿಷಯ ಇನ್ನೂ ಅಂತಿಮವಾಗದೆ ಉಳಿದಿದ್ದು, ಮುಂದಿನ ಹಂತದಲ್ಲಿ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ICC ಮತ್ತು BCB ನಿರ್ಧರಿಸಿವೆ. ಈ ಬೆಳವಣಿಗೆಯಿಂದಾಗಿ ಟಿ20 ವಿಶ್ವಕಪ್ ಪಂದ್ಯಾವಳಿಯ ಆತಿಥ್ಯ ಹಾಗೂ ವೇಳಾಪಟ್ಟಿಯ ಕುರಿತು ಮುಂದಿನ ದಿನಗಳಲ್ಲಿ ಮಹತ್ವದ ತೀರ್ಮಾನಗಳು ಕೈಗೊಳ್ಳುವ ಸಾಧ್ಯತೆ ಇದೆ.








