ಇಂದು ಮತ್ತು ನಾಳೆ ಬ್ಯಾಂಕ್ ಬಂದ್ : ಸಾರ್ವಜನಿಕರಿಗೆ ತಲೆ ಬಿಸಿ
ಬೆಂಗಳೂರು : ಸಾರ್ವಜನಿಕ ವಲಯದ ಬ್ಯಾಂಕ್ ಗಳ ಖಾಸಗೀಕರಣ ವಿರೋಧಿಸಿ ಬ್ಯಾಂಕ್ ನೌಕರರು ಇಂದು ಮತ್ತು ನಾಳೆ ಬಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗಲಿದೆ.
ಬ್ಯಾಂಕ್ ಗಳ ಖಾಸಗೀಕರಣಗೊಳಿಸುವುದನ್ನು ವಿರೋಧಿಸಿ ಬ್ಯಾಂಕ್ ನೌಕರರ 9 ಸಂಘಟನೆಗಳ ಒಕ್ಕೂಟ (ಯುಎಫ್ ಬಿಯು) ಬೆಂಗಳೂರು ಘಟಕದಿಂದ ಮಾರ್ಚ್ 15 ರಿಂದ ಎರಡು ದಿನಗಳ ಮುಷ್ಕರ ನಡೆಸುವುದಾಗಿ ತಿಳಿಸಿದೆ.
ಈ ಹಿನ್ನೆಲೆ ಇಂದು ಮೈಸೂರು ಬ್ಯಾಂಕ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಬ್ಯಾಂಕ್ ನೌಕರರು ಯೋಜನೆ ರೂಪಿಸಿಕೊಂಡಿದ್ದಾರೆ.
ಸತತ ನಾಲ್ಕು ದಿನ ರಜೆ
ಹೌದು..! ಬ್ಯಾಂಕ್ ನೌಕಕರ ಮುಷ್ಕರಿದಿಂದ ಬ್ಯಾಂಕ್ ಗಳಿಗೆ ನಾಲ್ಕುದಿನ ರಜೆ ಸಿಕ್ಕಂತಾಗುತ್ತದೆ. ಮಾರ್ಚ್ 13 ರಂದು ಎರಡನೇ ಶನಿವಾರದ ಹಿನ್ನೆಲೆ ಬ್ಯಾಂಕ್ ರಜೆ ಇತ್ತು, 14 ಭಾನುವಾರ ವಾಗಿತ್ತು.
ಇಂದು ಮತ್ತು ನಾಳೆ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಇರುವುದರಿಂದ ಸತತ ನಾಲ್ಕು ದಿನಗಳ ಕಾಲ ಬ್ಯಾಂಕ್ ಸೇವೆಗಳಲ್ಲಿ ವ್ಯತ್ಯಯವಾಗುವದಂತಾಗುತ್ತದೆ.