ಡೇಟಿಂಗ್ ಆಪ್ ನಲ್ಲಿ ಯುವತಿ ಸ್ನೇಹ – ಮೋಡಿಗೆ ಬಿದ್ದು 6 ಕೋಟಿ ಕಳೆದುಕೊಂಡ ಬ್ಯಾಂಕ್ ಮ್ಯಾನೇಜರ್…
ಡೇಟಿಂಗ್ ಆಪ್ ನಲ್ಲಿ ಯುವತಿಯ ಮೋಡಿಗೆ ಬಿದ್ದು ಇಂಡಿಯನ್ ಬ್ಯಾಂಕ್ ಬ್ರಾಂಚ್ ಮ್ಯಾನೇಜರ್ 6 ಕೋಟಿ ರೂ ವಂಚನೆ ಮಾಡಿರುವ ಆರೋಪ ಬೆಂಗಳೂರಿನ ಹನುಮಂತನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೇ 13 ರಿಂದ 19 ರ ವರೆಗೆ ಬ್ಯಾಂಕ್ ಠೇವಣಿದಾರರಾದ ಅನಿತಾ ಎಂಬುವವರ ಗಮನಕ್ಕೆ ಬರದೆ ಬ್ಯಾಂಕ್ ಮ್ಯಾನೇಜರ್ ಸುಮಾರು 5.70ಕೋಟಿಯಷ್ಟು ಠೇವಣಿದಾರರ ಎಫ್ ಡಿ ಮೇಲೆ ಲೋನ್ ತೆಗೆದಿದ್ದಾರೆ. ಅಸಿಸ್ಟೆಂಟ್ ಮ್ಯಾನೇಜರ್ ಕೌಸಲ್ಯಾ ಹಾಗೂ ಕ್ಲರ್ಕ್ ಮುನಿರಾಜುವನ್ನ ಬಳಸಿಕೊಂಡು ಲೋನ್ ಮಾಡಿಸಿಕೊಂಡಿದ್ದ ಆರೋಪ ಕೇಳಿಬಂದಿದೆ.
ಪಶ್ಚಿಮ ಬಂಗಾಳದ ಯುವತಿಯಯನ್ನ ಡೇಟಿಂಗ್ ಆಪ್ ನಲ್ಲಿ ಪರಿಚಯಿಸಕೊಂಡಿದ್ದ ಬ್ಯಾಂಕ್ ಮ್ಯಾನೇಜರ್ ಯುವತಿಗಾಗಿ ಪಶ್ಚಿಮ ಬಂಗಾಳದ 28 ಬ್ಯಾಂಕ್ ಖಾತೆಗೆ ಮತ್ತು ಕರ್ನಾಟಕದ ಎರಡು ಬ್ಯಾಂಕ್ ಖಾತೆಗಳಿಗೂ ಹಣ ಜಮಾ ಮಾಡಿ ಸಿಕ್ಕಿಗಾಕಿಕೊಂಡಿದ್ದಾನೆ.
ಹನುಮಂತ ನಗರ ಪೊಲೀಸರು ಬ್ಯಾಂಕ್ ಮ್ಯಾನೇಜರ್ ಹರಿ ಶಂಕರ್ ಬಂಧಿಸಿ 10 ಕಸ್ಟಡಿಗೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾನೆ. ವಿಚಾರಣೆ ವೇಳೆ ಡೇಟಿಂಗ್ ಆಫ್ ನಲ್ಲಿ ಯುವತಿ ಪರಿಚಯವಾಗಿ ಹಣ ಕೊಟ್ಟಿರೋದಾಗಿ ಆರೋಪಿ ಹೇಳಿಕೊಂಡಿದ್ದಾನೆ.
ಆರೋಪಿಯ ಅಸ್ಪಷ್ಟ ಹೇಳಿಕೆ ನೀಡಿರುವ ಹಿನ್ನಲೆ ಪೊಲೀಸ್ರಿಂದ ತನಿಖೆ ಮುಂದುವರೆದಿದೆ. 5.70 ಕೋಟಿ ಹಣ ಯುವತಿಗೆ ಕೊಟ್ಟಿರದೆ ಸ್ವಂತಕ್ಕೆ ಬಳಸಿಕೊಂಡಿರೋ ಶಂಕೆ ವ್ಯಕ್ತಪಡಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಹಣ ವರ್ಗಾಣವಣೆಯಾದ ವ್ಯಕ್ತಿಗಳ ಬಗ್ಹೆ ಬ್ಯಾಂಕ್ ಗಳಿಂದ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.