ಬ್ಯಾಂಕ್ ತೆರೆಯುವ ಸಮಯದಲ್ಲಿ ಬದಲಾವಣೆ – 1 ಗಂಟೆ ಹೆಚ್ಚುವರಿ ಸಮಯಾವಕಾಶ
ಬ್ಯಾಂಕ್ ಗ್ರಾಹಕರಿಗೆ ಇಲ್ಲೊಂದು ಮಹತ್ವದ ಸೂಚನೆಯಿದೆ. ನಿಮ್ಮ ಬ್ಯಾಂಕ್‌ಗೆ ಸಂಬಂಧಿಸಿದ ಕೆಲಸವನ್ನು ಪೂರ್ಣಗೊಳಿಸಲು ನಿಮಗೆ 1 ಗಂಟೆ ಹೆಚ್ಚುವರಿ ಸಮಯಾವಕಾಶ ಸಿಗಲಿದೆ. ಏಪ್ರಿಲ್ 18, 2022 ರಿಂದ ಅಂದರೆ ಇಂದಿನಿಂದ ಜಾರಿಗೆ ಬರುವಂತೆ ಆರ್‌ಬಿಐ ಮಾರುಕಟ್ಟೆಯ ವಹಿವಾಟಿನ ಸಮಯವನ್ನು ಬದಲಾಯಿಸಿದೆ. 4 ದಿನಗಳ ಬ್ಯಾಂಕ್ ರಜಾದ ನಂತರ ಭಾರತೀಯ ರಿಸರ್ವ್ ಬ್ಯಾಂಕ್ ಸೋಮವಾರ, ಏಪ್ರಿಲ್ 18, 2022 ರಿಂದ ಬ್ಯಾಂಕುಗಳ ಕೆಲಸದ ಸಮಯವನ್ನ ಬದಲಾಯಿಸಿದೆ. ಸೋಮವಾರದಿಂದ ಬೆಳಗ್ಗೆ 9 ಗಂಟೆಗೆ ಬ್ಯಾಂಕ್‌ಗಳು ತೆರೆಯಲಿವೆ.
ಈ ಹಿಂದೆ ಕರೋನಾ ಸೋಂಕಿನ ಹಿನ್ನೆಲೆ ದಿನದಲ್ಲಿ ಬ್ಯಾಂಕ್‌ಗಳ ತೆರೆಯುವ ಸಮಯವನ್ನು ಕಡಿಮೆ ಮಾಡಲಾಗಿತ್ತು. ಆದರೆ ಸೋಂಕಿನ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾದ ಕಾರಣ RBI ಈ ಹೊಸ ವ್ಯವಸ್ಥೆಯನ್ನು 18 ಏಪ್ರಿಲ್ 2022 ರಿಂದ ಜಾರಿಗೆ ತರುತ್ತಿದೆ. ಆದರೆ ಬ್ಯಾಂಕ್‌ಗಳ ಮುಚ್ಚುವ ಸಮಯದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಬದಲಾದ ಸಮಯದೊಂದಿಗೆ ವಿದೇಶಿ ವಿನಿಮಯ ಮಾರುಕಟ್ಟೆ ಮತ್ತು ಸರ್ಕಾರಿ ಸೆಕ್ಯುರಿಟಿಗಳಲ್ಲಿನ ವಹಿವಾಟುಗಳು ಇದೀಗ ಸಾಧ್ಯವಾಗಲಿದೆ ಎಂದು ಆರ್‌ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಆರ್‌ಬಿಐ ನಿಯಂತ್ರಿತ ಮಾರುಕಟ್ಟೆಗಳಾದ ಫೋರೆಕ್ಸ್ ಉತ್ಪನ್ನಗಳು, ರೂಪಾಯಿ ಬಡ್ಡಿ ದರದ ಉತ್ಪನ್ನಗಳು, ಕಾರ್ಪೊರೇಟ್ ಬಾಂಡ್‌ಗಳಲ್ಲಿನ ರೆಪೊ ಇತ್ಯಾದಿ. ವಿದೇಶಿ ವಿನಿಮಯಕ್ಕಾಗಿ (ಎಫ್‌ಸಿವೈ)/ ಭಾರತೀಯ ರೂಪಾಯಿ (ಐಎನ್‌ಆರ್) ವಹಿವಾಟುಗಳು ಅವುಗಳ ಕೋವಿಡ್-ಪೂರ್ವ ಸಮಯದ ಬದಲಿಗೆ ಅಂದರೆ. 10 AM ಗಂಟೆಯ ಬದಲಿಗೆ ಬೆಳಗ್ಗೆ 9 ಗಂಟೆಗೆ ಪ್ರಾರಂಭವಾಗಲಿವೆ.








