ಕೇರಳದಲ್ಲಿ ಇಂದಿನಿಂದ ಬ್ಯಾಂಕಿಂಗ್ ಸಮಯ ಬದಲಾವಣೆ
ಕಾಸರಗೋಡು, ಅಗಸ್ಟ್ 16: ಕೊರೋನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಇಂದಿನಿಂದ ಕೇರಳದಲ್ಲಿ ಬ್ಯಾಂಕಿಂಗ್ ಸಮಯಗಳಲ್ಲಿ ಬದಲಾವಣೆ ಮಾಡಲಾಗಿದೆ. ಓಣಂ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಗಳಲ್ಲಿ ಗ್ರಾಹಕರ ದಟ್ಟಣೆ ಹೆಚ್ಚುವ ಸಂಭವವಿದ್ದು, ಮುಂಜಾಗ್ರತಾ ಕ್ರಮವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಬ್ಯಾಂಕಿಂಗ್ ಸಮಯಗಳಲ್ಲಿ ಬದಲಾವಣೆ ತರಲಾಗಿದೆ.
0, 1, 2,3 ಎಂಬಿ ಅಕೌಂಟ್ ನಂಬರ್ ಗಳಲ್ಲಿ ಕೊನೆಗೊಳ್ಳುವ ಬ್ಯಾಂಕ್ ಖಾತೆಯ ಗ್ರಾಹಕರಿಗೆ ಬೆಳಿಗ್ಗೆ 10 ರಿಂದ 12 ಗಂಟೆ ತನಕ , 4, 5, 6, 7 ನಂಬರ್ ಗಳ ಗ್ರಾಹಕರಿಗೆ ಮಧ್ಯಾಹ್ನ 12 ರಿಂದ 2 ಗಂಟೆ ತನಕ , 8, 9 ನಂಬರ್ ನ ಗ್ರಾಹಕರಿಗೆ 2. 30 ರಿಂದ ಸಂಜೆ 4 ರ ತನಕ ಸಮಯ ನೀಡಲಾಗಿದೆ.
ಸಾಲಕ್ಕೆ ಸಂಬಂಧಿಸಿದಂತೆ ಅಥವಾ ಇನ್ನಿತರ ವ್ಯವಹಾರಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ. ಸೆ. 9 ರ ತನಕ ಈ ನಿಯಮ ಜಾರಿಯಲ್ಲಿರಲಿದ್ದು, ರಾಜ್ಯ ಮಟ್ಟದ ಬ್ಯಾಂಕಿಂಗ್ ಸಮಿತಿ ಈ ತೀರ್ಮಾನ ತೆಗೆದುಕೊಂಡಿದೆ