ಮಾ.27 ರಿಂದ 9 ದಿನಗಳಲ್ಲಿ 7 ದಿನ ಬಂದ್ ಆಗಲಿವೆ ಬ್ಯಾಂಕ್ ಗಳು
ನವದೆಹಲಿ : ಮಾರ್ಚ್ 27 ರಿಂದ ಒಂಭತ್ತು ದಿನಗಳಲ್ಲಿ ಏಳು ದಿನ ಬ್ಯಾಂಕ್ ಗಳು ಬಂದ್ ಆಗಲಿವೆ.
ಎರಡು ದಿನಗಳ ವಾರಾಂತ್ಯ ಮತ್ತು ಹೋಳಿ ಹಬ್ಬ ಸೇರಿ ಮಾರ್ಚ್ 27-29ರ ಅವಧಿಯಲ್ಲಿ ಭಾರತದ ಎಲ್ಲಾ ಬ್ಯಾಂಕ್ ಗಳು ಸತತ ಮೂರು ದಿನಗಳವರೆಗೆ ಮುಚ್ಚಿರಲಿವೆ.
ಆದ್ದರಿಂದ ಜನ ತಮ್ಮ ಬ್ಯಾಂಕ್‍ಗೆ ಸಂಬಂಧಿತ ಕೆಲಸವನ್ನು ಮಾರ್ಚ್ 30(ಮಂಗಳವಾರ) ಮತ್ತು ಏಪ್ರಿಲ್ 3(ಶನಿವಾರ) ಎರಡು ದಿನಗಳಲ್ಲಿ ಮಾತ್ರ ಪೂರ್ಣಗೊಳಿಸಬಹುದು.
ಈ ಕೆಳಗಿನ ರಜಾದಿನ ಪಟ್ಟಿಯನ್ನ ಆರ್‍ಬಿಐ ನೆಗೋಷಬಲ್ ಇನ್ ಸ್ಟ್ರುಮೆಂಟ್ಸ್ ಆಕ್ಟ್ ಅಡಿ ತಿಳಿಸಿದೆ.
ಮಾರ್ಚ್ 27- ನಾಲ್ಕನೇ ಶನಿವಾರ
ಮಾರ್ಚ್ 28- ಭಾನುವಾರ
ಮಾರ್ಚ್ 29 ಹೋಳಿ
ಮಾರ್ಚ್ 31- 2021ರ ಹಣಕಾಸು ವರ್ಷ ಮುಕ್ತಾಯ
ಏಪ್ರಿಲ್ 01- ಬ್ಯಾಂಕ್ ಗಳ ಆಂತರಿಕ ಕೆಲಸ
ಏಪ್ರಿಲ್ 02 – ಗುಡ್ ಫ್ರೈಡೇ
ಏಪ್ರಿಲ್ 04- ವಾರದ ರಜೆ (ಭಾನುವಾರ)