ಅಫ್ಗಾನ್ ಮೇಲೆ ಹಿಡಿತ ಸಾಧಿಸಿರುವ ತಾಲಿಬಾನಿಗಳು ದೇಶವನ್ನ ಅಕ್ಷರಸಹ ನರಕ ಮಾಡಿಬಿಟ್ಟಿದ್ದಾರೆ.. ಮಹಿಳೆಯರ ಹಕ್ಕುಗಳನ್ನ ಕಿತ್ತುಕೊಂಡು ಮತ್ತೆ ಮಹಿಳೆಯರನ್ನ ಮನೆಗೆ ಸೀಮಿತಗೊಳಿಸುವಂತಹ ಕಾನೂನುಗಳನ್ನ ತಂದಿದ್ದಾರೆ..
ಅಫ್ಘಾನಿಸ್ತಾನದ ತಾಲಿಬಾನ್ ಸಂಬಂಧಿತ ಫೇಸ್ ಬುಕ್ ಪುಟಗಳನ್ನು ಮೆಟಾ ಬ್ಯಾನ್ ಮಾಡಿದೆ.. ಇದೀಗ ಟ್ವಿಟ್ಟರ್ ನಲ್ಲಿ ತಾಲಿಬಾನಿಗಳನ್ನ ಬ್ಯಾನ್ ಮಾಡಲು ಅಭಿಯಾನ ಶುರುವಾಗಿದೆ.. ಅಫ್ಗಾನ್ ಜನರು ಟ್ವಿಟ್ಟರ್ ನಲ್ಲಿ ಹೊಸ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ತಾಲಿಬಾನ್ ಅನ್ನು ಬ್ಯಾನ್ ಮಾಡುವಂತೆ ಟ್ವೀಟ್ ಗಳನ್ನು ಮಾಡ್ತಿದ್ದಾರೆ.
#BanTaliban ಬಳಸಿ ಅಫ್ಘಾನಿಸ್ತಾನ , ಪಾಕಿಸ್ತಾನ , UAE , ಜರ್ಮನಿ, ಯುರೋಪ್, ಭಾರತ ಹಾಗೂ ಅಮೆರಿಕದ ಜನರೂ ಸಹ ಟ್ವೀಟ್ ಮಾಡಿ, ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ.
ವರದಿಗಳ ಪ್ರಕಾರ ಅಫ್ಘಾನಿಸ್ತಾನದ ಪತ್ರಕರ್ತರು, ನಾಗರಿಕ ಕಾರ್ಯಕರ್ತರು, ವಕೀಲರು ಟ್ವಿಟ್ಟರ್ ಬಳಸುವ ಎಲ್ಲಾ ತಾಲಿಬಾನ್ ಸದಸ್ಯರಿಗೂ ಪ್ರವೇಶ ನಿಷೇಧಿಸುವಂತೆ ಟ್ವಿಟ್ಟರ್ ಅನ್ನು ಒತ್ತಾಯಿಸಿದ್ದಾರೆ.
ತಾಲಿಬಾನ್ ತಪ್ಪು ಮಾಹಿತಿ ಹರಡುವಿಕೆ, ಹಿಂಸಾಚಾರ, ಶಿರಚ್ಛೇದದ ಕರೆಗಳು, ಭಯೋತ್ಪಾದಕರಿಗೆ ಬೆಂಬಲ ನೀಡುವುದು ಸೇರಿದಂತೆ ಹಲವು ಆಘಾತಕರ ವಿಷಯಗಳನ್ನು ಈ ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಳ್ಳುತ್ತದೆ ಎಂಬ ಕಾರಣಕ್ಕೆ ಜನರು ಈ ಅಭಿಯಾನಕ್ಕೆ ಮುಂದಾಗಿದ್ದಾರೆ.








