ಅಮೆರಿಕಾದಲ್ಲಿ ಹಿಂಸಾಚಾರಕ್ಕೆ ಕಾರಣ ಡೊನಾಲ್ಡ್ ಟ್ರಂಪ್: ಮಾಜಿ ಅಧ್ಯಕ್ಷ ಒಬಾಮ
ಅಮೆರಿಕಾ : ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡೆನ್ ವಿರುದ್ಧ ಹೀನಾಯವಾಗಿ ಸೋಲನುಭವಿಸಿರುವ ಡೊನಾಲ್ಡ್ ಟ್ರಂಪ್ ಅವರು ಆರಂಭದಿಂದಲೂ ಸೋಲೊಪ್ಪಿಕೊಳ್ಳೊಲು ತಯಾರಿಲ್ಲ. ಅಧಿಕಾರ ಉಳಿಸಿಕೊಳ್ಳಲು ಇದ್ದ ಬದ್ದ ಪ್ರಯತ್ನಗಳನ್ನೆಲ್ಲಾ ಮಾಡಿ ಕೊನೆಗೆ ನ್ಯಾಯಾಲಯದಲ್ಲೂ ಸೋಲು ಕಂಡರು. ಇದೀಗ ಮತ್ತೊಂದು ಪ್ರಯತ್ನ ಮಾಡಿ ಇಡೀ ವಿಶ್ವದ ಮುಂದೆಯೇ ಚಿಕ್ಕವರಾಗಿದ್ದಾರೆ ವಿಶ್ವದ ದೊಡ್ಡಣ್ಣನ ಅಧ್ಯಕ್ಷ ಟ್ರಂಪ್ ಅವರು… ಹೌದು ಟ್ರಂಪ್ ಬೆಂಬಲಿಗರ ಹಿಂಸಾಚಾರಕ್ಕೆ ಸದ್ಯ ಅಮೆರಿಕಾ ಬೆಚಚ್ಚಿ ಬಿದ್ದಿದೆ.
ಅಭಿವೃದ್ಧಿ ವಿಚಾರದಲ್ಲಿ ನಾನು ವಿಫಲ : ಕೊನೆಗೂ ತಪ್ಪೊಪ್ಪಿಕೊಂಡ್ರಾ ಕಿಮ್
ಇದೀಗ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಖಂಡಿಸಿದ್ದಾರೆ. ಅಮೆರಿಕದ ಹಿಂಸಾಚಾರಕ್ಕೆ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ರಿಪಬ್ಲಿಕನ್ನರು ಕಾರಣ. ಈ ಘಟನೆಯನ್ನು ನಮ್ಮ ದೇಶಕ್ಕೆ ಅತಿ ದೊಡ್ಡ ಅಗೌರವ ಹಾಗೂ ನಾಚಿಕೆಗೇಡಿನ ಸಂಗತಿ. ಕಾನೂನು ಬದ್ಧ ಚುನಾವಣೆಯಿಂದ ಹೊರಬಂದ ಫಲಿತಾಂಶದ ವಿರುದ್ಧ ಆಧಾರರಹಿತ ಸುಳ್ಳುಗಳನ್ನು ಆರೋಪಿಸುವುದನ್ನು ಮುಂದುವರಿಸಿರುವ ಡೊನಾಲ್ಡ್ ಟ್ರಂಪ್ ಅವರೇ ಈ ಪ್ರತಿಭಟನೆಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel