ಸಿಪಿಎಲ್ -2020: ಸೇಂಟ್ ಕಿಟ್ಸ್ ವಿರುದ್ಧ ಆರು ರನ್ ಗಳ ರೋಚಕ ಜಯ ಸಾಧಿಸಿದ ಬಾರ್ಬೋಡಸ್ ಟ್ರಿಡೆಂಟ್ಸ್
ಕೆರೆಬಿಯನ್ ಪ್ರೀಮಿಯರ್ ಲೀಗ್‍ನ ಇನ್ನೊಂದು ಪಂದ್ಯದಲ್ಲಿ ಬಾರ್ಬೊಡಸ್ ಟ್ರಿಡೆಂಟ್ಸ್ ತಂಡ ಆರು ರನ್ ಗಳ ರೋಚಕ ಜಯ ಸಾಧಿಸಿದೆ. ಸೇಂಟ್ ಕಿಟ್ಸ್ ನೇವಿಸ್ ಪೆಟ್ರಿಯೋಟ್ಸ್ ಗೆಲುವನ್ನು ಟ್ರಿಡೆಂಟ್ಸ್ ತಂಡದ ರಶೀದ್ ಅವರು ಕಸಿದುಕೊಂಡ್ರು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸೇಂಟ್ ಕಿಟ್ಸ್ ನೇವಿಸ್ ಪೆಟ್ರಿಯೋಟ್ಸ್ ತಂಡ ಐದು ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತ್ತು. ಡ ಸಿಲ್ವಾ ಅವರ ಅಜೇಯ 41 ಮತ್ತು ಡಂಕ್ 34 ರನ್ ದಾಖಲಿಸಿದ್ರೆ, ಲಿಯಾನ್ 19 ರನ್ ಸಿಡಿಸಿದ್ರು. ಬಾರ್ಬೊಡಸ್ ಟ್ರಿಡೆಂಟ್ಸ್ ತಂಡದ ಪರ ಸ್ಯಾಂಟ್ನರ್ 18ಕ್ಕೆ 2 ಹಾಗೂ ರಶೀದ್ 27ಕ್ಕೆ 2 ವಿಕೆಟ್ ಉರುಳಿಸಿದ್ರು.
ಸಾಧಾರಣ ಮೊತ್ತದ ಸವಾಲನ್ನು ಬೆನ್ನಟ್ಟಿದ್ದ ಬಾರ್ಬೋಡಸ್ ಟ್ರಿಡೆಂಟ್ಸ್ ತಂಡ ಏಳು ಬೀಳುಗಳ ನಡುವೆ ಪಂದ್ಯದಲ್ಲಿ ಗೆಲುವಿನ ನಗೆ ಬೀರಿತ್ತು. ಆಲ್ ರೌಂಡ್ ಆಟವನ್ನಾಡಿದ್ದ ರಶೀದ್ ಅವರು ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಶೀದ್ ಅವರು ಅಜೇಯ 26 ರನ್ ಸಿಡಿಸಿದ್ರು. ಮತ್ತೊಂದೆಡೆ ಜೇಸನ್ ಹೋಲ್ಡರ್ 38 ರನ್ ಮತ್ತು ಮೇಯರ್ಸ್ 37 ರನ್ ದಾಖಲಿಸಿದ್ರು. ಸೇಂಟ್ ಕಿಟ್ಸ್ ತಂಡದ ಪರ ಎಮ್ರಿಟ್, ಕಾಟ್ರೆಲ್ ಮತ್ತು ತನ್ವೀರ್ ತಲಾ ಎರಡು ವಿಕೆಟ್ ಉರುಳಿಸಿದ್ರು.