ಅರಬ್ಬಿ ಸಮುದ್ರದಲ್ಲಿ ಬಾರ್ಜ್ ಮುಳುಗಡೆ – ದುರಂತದಲ್ಲಿ ಮಥಪಟ್ಟವರ ಕುಟುಂಬಕ್ಕೆ 75 ಲಕ್ಷ ರೂ. ವರೆಗೂ ಪರಿಹಾರ
ಮುಂಬೈ : ತೌತೆ ಚಂಡಮಾರುತದಿಂದ ಅರಬ್ಬಿ ಸಮುದ್ರದಲ್ಲಿ ಬಾರ್ಜ್ ಮುಳುಗಿ ಸಂಭವಿಸಿದ ದುರಂತದಲ್ಲಿ ಮೃತರ ಸಂಖ್ಯೆ 51ಕ್ಕೆ ಏರಿದೆ. ಬಾರ್ಜ್‌ನಿಂದ ನಾಪತ್ತೆಯಾದ 24 ಮಂದಿ ಮತ್ತು ಆ್ಯಂಕರ್ ನಿರ್ವಹಣೆ ದೋಣಿಯಿಂದ ನಾಪತ್ತೆಯಾದ 11 ಮಂದಿಗಾಗಿ ಶೋಧ ಮುಂದುವರಿದಿದೆ.
ಇನ್ನೂ ಮೃತರ ಕುಟುಂಬಸ್ಥರಿಗೆ 35 ಲಕ್ಷ ರೂಪಾಯಿಗಳಿಂದ ಹಿಡಿದು 75 ಲಕ್ಷ ರೂಪಾಯಿಯ ವರೆಗೂ ಪರಿಹಾರ ನೀಡುವುದಾಗಿ ಅಫ್ಕನ್ಸ್ ಇಫ್ರಾಸ್ಟ್ರಕ್ಚರ್ ಸಂಸ್ಥೆಯು ಘೋಷಿಸಿದೆ.
ದುರಂತದಲ್ಲಿ ಜೀವ ಕಳೆದುಕೊಂಡ ನೌಕರರು ಮತ್ತು ಸಿಬ್ಬಂದಿಯ ಬಾಕಿ 10 ವರ್ಷಗಳ ಸೇವಾ ವೇತನ ಮತ್ತು ವಿಮಾ ಪರಿಹಾರವನ್ನು ಇದು ಒಳಗೊಂಡಿದೆ. ಪ್ರತಿ ಕುಟುಂಬಕ್ಕೆ 35 ಲಕ್ಷ ರೂಪಾಯಿಯಿಂದ 75 ಲಕ್ಷ ರೂಪಾಯಿಗಳ ವರೆಗೂ ಪರಿಹಾರ ಸಿಗಲಿದೆ ಎಂದು ಅಫ್ಕನ್ಸ್ ಸಂಸ್ಥೆಯು ತಿಳಿಸಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ