ಸದಾನಂದಗೌಡರು ದೈವಿ ಪುರುಷರು : ಡಿವಿಎಸ್ ಗೆ ಯತ್ನಾಳ್ ಡಿಚ್ಚಿ
ವಿಜಯಪುರ : ಯತ್ನಾಳ್ ಪಕ್ಷದ ರಾಷ್ಟ್ರೀಯ ನಾಯಕನಲ್ಲ. ಹೇಳಿಕೆ ನೀಡುವ ಸ್ಥಾನಮಾನದಲ್ಲೂ ಅವರು ಇಲ್ಲ ಎಂಬ ಕೇಂದ್ರ ಡಿ ವಿ ಸದಾನಂದಗೌಡ ಹೇಳಿಕೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್ ನೀಡಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಸದಾನಂದಗೌಡ ಅವರಿಗೆ ಅಭಿನಂದನೆಗಳು, ಟೀಕೆ ಮಾಡ್ತಾರೆ ಬಹಳ ಹಿರಿಯರಿದ್ದಾರೆ. ಕೇಂದ್ರ ಮಂತ್ರಿಯಾಗಿ ಯಶಸ್ವಿ ಆಗಿದ್ದರಿಂದ ಇವತ್ತು ರಾಸಾಯನಿಕ ಗೊಬ್ಬರದ ಮಂತ್ರಿ ಆಗಿದ್ದಾರೆ. ಅದಕ್ಕೆ ಮಾತನಾಡುತ್ತಾರೆ.
ನನಗಿಂತಲೂ ಅವರು ಹಿರಿಯರೇನಲ್ಲ. ನಮ್ಮ ಹಿರಿಯರು ಯಡಿಯೂರಪ್ಪ, ಅನಂತ ಕುಮಾರ್, ಸದಾನಂದಗೌಡರು ನನ್ನ ಸಮಾನ ವಯಸ್ಕರರು. ಅವರಿಗೆ ನನ್ನ ಮೇಲೆ ಪ್ರೀತಿ ಮೊದಲಿನಿಂದಲೂ ಇದೆ. ನಾವಿಬ್ಬರೂ 1992ರಲ್ಲಿ ಒಟ್ಟಿಗೆ ಶಾಸಕರಾಗಿದ್ದೇವೆ.
ಚಂದ್ರಯಾನ -2 ರ ಆರಂಭಿಕ ದತ್ತಾಂಶ ಬಿಡುಗಡೆ
ರಾಜ್ಯಾಧ್ಯಕ್ಷ ಇದ್ದಾಗಿನಿಂದ ಪ್ರೀತಿ ಇದೆ. ಆವಾಗ ಅವರು 6 ವರ್ಷ ಪಕ್ಷದಿಂದ ನನ್ನ ಉಚ್ಛಾಟನೆ ಮಾಡಿದ್ದರಲ್ಲ ಆಗಿನಿಂದ ಇದೆ. ಅವರು ದೈವಿ ಪುರುಷರು, ಎಲ್ಲ ಅನುಭವಿಸಿದ್ದಾರೆ. ರಾಷ್ಟ್ರೀಯ ನಾಯಕರು ನಮ್ಮಂತಹ ಸಾಮಾನ್ಯ ಶಾಸಕರ ಬಗ್ಗೆ ಮಾತನಾಡಬಾರದು ಎಂದು ಕಾಲೆಳೆದರು.
ಯತ್ನಾಳ್ ಪಕ್ಷದ ರಾಷ್ಟ್ರೀಯ ನಾಯಕನಲ್ಲ ಎಂಬ ಸದಾನಂದಗೌಡರ ಹೇಳಿಕೆಗೆ ಟಾಂಗ್ ಕೊಟ್ಟ ಬಸನಗೌಡ ಪಾಟೀಲ್, ಸದಾನಂದಗೌಡರು ರಾಷ್ಟ್ರಮಟ್ಟದ ನಾಯಕರು. ನಾವು ವಾಜಪೇಯಿ ಅವರ ಮಂತ್ರಿ ಮಂಡಲದಲ್ಲಿ ಮಂತ್ರಿ ಆದವರು.
ಹಿರಿಯತನವನ್ನ ನೀವೆ ಲೆಕ್ಕ ಹಾಕಿ. ಅವರು ಏನೂ ಇರಲಾರದಾಗ ನಾವು ಕೇಂದ್ರ ಮಂತ್ರಿ ಆಗಿದ್ದೇವು. ಹೀಗಾಗಿ ನಾವು ಸಾಮಾನ್ಯ ಶಾಸಕ. ಅವರು ಈಗೀಗ ಮಂತ್ರಿ ಆಗಿದ್ದಾರೆ, ಅದಕ್ಕೆ ಅವರು ರಾಷ್ಟ್ರೀಯ ನಾಯಕರು ಎಂದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









