ಕೇವಲ ಹಿಂದು ಹಬ್ಬಗಳಿಂದಲೇ ಕೊರೊನಾ ಹರಡುತ್ತಾ : ಯತ್ನಾಳ್
ವಿಜಯಪುರ : ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಸರ್ಕಾರ ಗಣೇಶೋತ್ಸವಕ್ಕೆ ನಿರ್ಬಂಧ ಹೇರಿದೆ.
ಇದಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ಆಕ್ರೋಶ ಹೊರಹಾಕಿದ್ದು, ಕೇವಲ ಹಿಂದು ಹಬ್ಬಗಳಿಂದಲೇ ಕೊರೊನಾ ಹರಡುತ್ತಾ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ ನನಗೆ ಗುಂಡು ಹೊಡೆಯುವದಾದ್ರೆ ಹೊಡೆದು ಹಾಕಿ. ಆದ್ರೆ ಗಣೇಶ ಚತುರ್ಥಿಯನ್ನು ವಿಜೃಂಬಣೆಯಿಂದ ನಾವು ಆಚರಿಸುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ.
ಶನಿವಾರ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾದ ಹೆಸರಲ್ಲಿ ನಿಬರ್ಂಧನೆಗಳು ಕೇವಲ ಗಣೇಶ ಚತುರ್ಥಿಗೆ ಮೀಸಲಾಗಿವೆ.
ಬೇರೆ ಹಬ್ಬಗಳಿಗೆ ಅದು ಅನ್ವಯ ಆಗೋದಿಲ್ಲವಾ? ಕೇವಲ ಹಿಂದು ಹಬ್ಬಗಳಿಂದಲೇ ಕೊರೊನಾ ಹರಡುತ್ತಾ ಎಂದು ಪ್ರಶ್ನಿಸಿದ್ದಾರೆ.
ಗಣೇಶ ಚತುರ್ಥಿ, ದೀಪಾವಳಿ, ಸಂಕ್ರಮಣಕ್ಕಷ್ಟೆ ಕೊರೊನಾ ನಿಯಮಗಳು ಬೇಡ ಅಂತಾ ಸಿಎಂ ಬಳಿ ಹೇಳಿದ್ದೇನೆ ಎಂದು ತಿಳಿಸಿದರು.
ಅಲ್ಲದೇ ಯಾವುದೇ ಕಾರಣ ಗಣೇಶ ಚತುರ್ಥಿಗೆ ಯಾವುದೇ ಅಡತಡೆ ಮಾಡಬೇಡಿ ಅಂತಾ ಜಿಲ್ಲಾಧಿಕಾರಿ, ಎಸ್.ಪಿ. ಅವರಿಗೆ ಸಿಎಂ ಸೂಚಿಸಿದ್ದಾರೆ.
ಒಂದು ವೇಳೆ ಅಡತಡೆ ಮಾಡಿದ್ರೂ ನಾನು ಕೇಳಲ್ಲ. ವಿಜಯಪುರದಲ್ಲಿ ವಿಜೃಂಭಣೆಯಿಂದ ಗಣೇಶ ಚತುರ್ಥಿ ಆಚರಿಸುತ್ತೇವೆ ಎಂದು ಸಾರಿದರು.









