ಸಿಎಂ ಬದಲಾವಣೆ ಮಾಡುವುದಿದ್ದರೆ ಲಿಂಗಾಯತರಿಗೆ ಪ್ರಾತಿನಿಧ್ಯ ನೀಡಲಿ
ಬೆಂಗಳೂರು : ಸಿಎಂ ಬದಲಾವಣೆ ಮಾಡುವುದಿದ್ದರೆ ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯದವರಿಗೇ ಪ್ರಾತಿನಿಧ್ಯ ನೀಡಲಿ ಎಂದು
ಲಿಂಗಾಯತ ಸಮುದಾಯದ ಬಸವ ಜಯಮೃತ್ಯುಂಜಯ ಸ್ವಾಮಿ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದ್ದು, ಬಿ.ಎಸ್.ಯಡಿಯೂರಪ್ಪನವರ ಪರ-ವಿರೋಧ ಬಣಗಳು ಬಡಿದಾಡಿಕೊಳ್ಳುತ್ತಿವೆ. ಈ ಮಧ್ಯೆ ಈ ವಿಚಾರವಾಗಿ ಲಿಂಗಾಯತ ಸಮುದಾಯದ ಬಸವ ಜಯಮೃತ್ಯುಂಜಯ ಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ನಾವು ಸಿಎಂ ಬದಲಾವಣೆ ಮಾಡಬೇಕೆಂದು ಒತ್ತಡ ಹೇರಲು ಸಾಧ್ಯವಿಲ್ಲ, ಸಿಎಂ ಬದಲಾವಣೆ ಮಾಡುವ ಅಧಿಕಾರ ನಮಗಿಲ್ಲ, ನಾವು ಕೇಂದ್ರದ ಬಿಜೆಪಿ ನಾಯಕರಿಗೆ ಸಲಹೆ ಕೊಡಬಹುದಷ್ಟೆ.
ಯಡಿಯೂರಪ್ಪನವರ ಬದಲಿಗೆ ನಾಯಕರಿಲ್ಲ ಎಂದು ಬಿಂಬಿಸುವುದು ಬೇಡ, ಉತ್ತರ ಕರ್ನಾಟಕದ ಪ್ರತಿ ಜಿಲ್ಲೆಗಳಲ್ಲಿ ಪ್ರಬಲ ಲಿಂಗಾಯತ ನಾಯಕರು ತುಂಬಿತುಳುಕುತ್ತಿದ್ದಾರೆ.
ಸಿಎಂ ಬದಲಾವಣೆ ಮಾಡುವುದಿದ್ದರೆ ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯದವರಿಗೇ ಪ್ರಾತಿನಿಧ್ಯ ನೀಡಲಿ ಎಂದು ಒತ್ತಾಯಿಸಿದ್ದಾರೆ.
ಅಲ್ಲದೆ ನಾನು ಲಿಂಗಾಯತ ಸಮುದಾಯದ ಪ್ರಾತಿನಿಧ್ಯ ವಹಿಸುತ್ತಿರುವುದರಿಂದ, ನಮ್ಮ ಸಮುದಾಯದವರಿಗೆ ಪ್ರಾತಿನಿಧ್ಯ ಸಿಗಲಿ ಎಂದು ಹೀಗೆ ಹೇಳುತ್ತಿದ್ದೇನೆ, ಅದು ಬಿಟ್ಟರೆ ನಾನು ಸಿಎಂ ಬದಲಾವಣೆಗೆ ಒತ್ತಾಯ ಮಾಡುವುದಿಲ್ಲ, ಅವರಿಗೆ ಸಲಹೆ ಮಾತ್ರ ನೀಡಬಹುದು ಎಂದರು.