ಗದಗ: ಪಂಚಮಸಾಲಿ ಮೀಸಲಾತಿ (Panchamasali Reservation) ಹೋರಾಟದ ಮುಂಚೂಣಿ ವಹಿಸಿಕೊಂಡಿರುವ ಬಸವಜಯ ಮೃತ್ಯುಂಜಯ ಸ್ವಾಮೀಜಿ (Basava Jaya Mruthyunjaya Swamiji) ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿಗರ ಹೋರಾಟ ಇನ್ನೂ ಮುಂದುವರೆದಿದೆ. ಬೆಳಗಾವಿಯಲ್ಲಿ (Belagavi) ಗಾಯಗೊಂಡ ಸಮಾಜದ ಜನರ ಮನೆಗೆ ಭೇಟಿನೀಡಿ ಸಾಂತ್ವನ ಹೇಳಲಿದ್ದೇವೆ. ಪ್ರತಿಜ್ಞಾ ಕ್ರಾಂತಿ ಅಭಿಯಾನ ಮೂಲಕ ಸಮಾಜದ ಜನರ ಪರಿವರ್ತನೆ ಮಾಡುತ್ತೇವೆ ಎಂದಿದ್ದಾರೆ.
8ನೇ ಹಂತದ ಹೋರಾಟ ಕೂಡಲಸಂಗಮದಿಂದ ಆರಂಭವಾಗಿದೆ. ಪ್ರತಿ ವಿಧಾನಸಭೆ ಕ್ಷೇತ್ರದ ಪಂಚಮಸಾಲಿ ಸಮಾಜದವರ ಮನೆಗೆ ಭೇಟಿ ನೀಡುತ್ತೇವೆ. ಸರ್ಕಾರಗಳಿಂದಾದ ದೌರ್ಜನ್ಯ, ಮಾರಣಾಂತಿಕ ಹಲ್ಲೆ ವಿಷಯ ಜನರಿಗೆ ತಿಳಿಸುತ್ತೇವೆ. ಅವರ ಅಭಿಪ್ರಾಯ ಕ್ರೂಢೀಕರಣ ಮಾಡಿ ಮೀಸಲಾತಿ ನೀಡದವರಿಗೆ ಯಾವ ರೀತಿ ಅಸಹಕಾರ ಕೊಡಬೇಕು. ಗೆದ್ದು ನಮಗೆ ಮೀಸಲಾತಿ ಕೊಡುವವರಿಗೆ ಯಾವ ರೀತಿ ಸಹಕಾರ ಕೊಡಬೇಕು. ಪ್ರತಿ ಹಳ್ಳಿಯಲ್ಲೂ ಪ್ರತಿಜ್ಞಾ ಕ್ರಾಂತಿ ಅಭಿಯಾನ ಹೆಸರಲ್ಲಿ ಹೋರಾಟ ಮಾಡುತ್ತೇವೆ ಎಂದಿದ್ದಾರೆ.








