ಮೀಸಲಾತಿ ಕೊಟ್ಟರೆ ಸನ್ಮಾನ ಮಾಡುತ್ತೆವೆ ಕೊಡದೇ ಇದ್ದರೇ ಹೋರಾಟ ಮಾಡುತ್ತೆವೆ : ಯತ್ನಾಳ್
ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ನೀಡುವ ವಿಚಾರವಾಗಿ ಇಬ್ಬರು ಮೂರು ಮಂದಿ ಕುತಂತ್ರ ಮಾಡುತ್ತಿದ್ದಾರೆ ಅವರ ಮಾತನ್ನು ಕೇಳಬೇಡಿ ಎಂದು ಸಿಎಂಗೆ ಸಲಹೆ ನೀಡಿದ್ದೆನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ
ಜಿಲ್ಲೆಯ ರಾಮದುರ್ಗ ತಾಲೂಕಿನ ಲಿಂಗಾಯತ ಪಂಚಮಸಾಲಿ ಪ್ರತಿಭಟನಾ ರ್ಯಾಲಿಯಲ್ಲಿ ಮಾತನಾಡಿದ ಅವರು ಸಲಹೆಯನ್ನು ಒಳ್ಳೇರಿತಿಯಾಗಿ ತೆಗೆದುಕೊಂಡರೆ ಅವರಿಗೆ ಒಳ್ಳೇದಾಗುತ್ತೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2A ಮೀಸಲಾತಿ ಕೊಟ್ಟೆ ಕೊಡುತ್ತಾರೆ ಎನ್ನುವ ಭರವಸೆ ಇದೆ. ಕೊಟ್ಟರೆ ಸನ್ಮಾನ ಮಾಡುತ್ತೆವೆ ಕೊಡದೇ ಇದ್ದರೇ ಹೋರಾಟ ಮಾಡುತ್ತೆವೆ ಎಂದು ಆಕ್ರೋಶ ಹೊರಹಾಕಿದರು.
ಮುಂದುವರೆದು ಮೀಸಲಾತಿ ವಿಚಾರದಲ್ಲಿ ಮೂಗಿಗೆ ತುಪ್ಪಾ ಹಚ್ಚುವ ಕೆಲಸ ಈಗಾಗಲೇ ನಡೆದಿದೆ. ಮೊನ್ನೆ ಸಿಎಂ ಬೊಮ್ಮಾಯಿ ವಿಧಾಸೌಧದಲ್ಲಿ ಹೇಳಿದರು, ಎಂಟು ಹತ್ತು ದಿನದಲ್ಲಿ ವರದಿ ಬರುತ್ತೆ ವರದಿ ಆದರಿಸಿ ಸರ್ವ ಪಕ್ಷ ಸಭೆ ಕರೆದು ಮೀಸಲಾತಿ ನೀಡುತ್ತೇನೆ ಎಂದಿದರು. ಅವರು ಹೇಳಿ ತಿಂಗಳ ಕಳೆಯುತ್ತಾ ಬಂದಿದೆ. ಇನ್ನುಮುಂದೆ ಕಾಯಲು ಆಗುವುದಿಲ್ಲ. ಏನು ಎನ್ನುವುದನ್ನು ಜನರ ಮುಂದೆ ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದರು.
ಇನ್ನೂ ಕಳೆದ ಬಾರಿ ಹೋರಾಟ ಮಾಡಿದನ್ನು ನೋಡಿದ್ದಾರೆ. ಜನರ ನಾಡಿ ಮಿಡಿತ ಏನು ಎಂದು ಕೇಂದ್ರ ನಾಯಕರಿಗೆ ಗೋತ್ತಾಗಿದೆ. ಕಳೆದ ಬಾರಿ ಬೆಂಗಳೂರಿನಲ್ಲಿ 10 ಲಕ್ಷ ಜನರ ಸೇರಿಸಿ ಪ್ರತಿಭಟನೆ ಮಾಡಿದ್ದೆವೆ. ಆ ರ್ಯಾಲಿ ಮಾಡಿದಕ್ಕೆ ಕರ್ನಾಟಕದಲ್ಲಿ ಲಿಂಗಾಯತರಲ್ಲಿ ಪಂಚಮಸಾಲಿ 70 ಪ್ರತಿಶತ ಇದ್ದಾರೆ ಎನ್ನುವುದು ಗೋತ್ತಾಗಿದ್ದು. ಇದನ್ನು ಸ್ವತಹ ಪ್ರಧಾನ ಮಂತ್ರಿಗಳೇ ಅವರ ಐಬಿ ದಿಂದ ಮಾಹಿತಿ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.
ಈ ವಿಷಯ ಕೇಂದ್ರ ಸರ್ಕಾರಕ್ಕೆ ಮನವರಿಕೆಯಾಗಿದೆ ಇದೊಂದು ದೊಡ್ಡ ಸಮಾಜ ನ್ಯಾಯ ಕೊಡಬೇಕು ಎಂದು. ಹೀಗಾಗಿ ಮೊನ್ನೆ ಮರಾಠಾ ಸಮುದಾಯಕ್ಕೆ 2A ಮೀಸಲಾತಿ ನೀಡಿದಾಗ ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಕಾನೂನು ತಿದ್ದುಪಡಿ ಮಾಡಿ ಆಯಾ ರಾಜ್ಯಗಳಿಗೆ ಮೀಸಲಾತಿ ನೀಡುವ ಅವಕಾಶ ನೀಡಿದ್ದು. ಯಾಕೆಂದರೆ ಯಾವಯಾವ ರಾಜ್ಯದಲ್ಲಿ ಯಾವ ಸಮಾಜ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದೆ ಎಂದು ಪರಿಶೀಲನೆ ಮಾಡಿ ಮೀಸಲಾತಿ ನೀಡಲು ಅವಕಾಶ ನೀಡಿದೆ ಎಂದರು.
ಅಲ್ಲದೇ ಹಿಂದುಳಿದ ಮೀಸಲಾತಿ ಆಯಾ ರಾಜ್ಯಗಳೇ ನೀಡಬೇಕು ಎಂದು ಸಂವಿಧಾನದಲ್ಲಿ ತಿದ್ದುಪಡಿಮಾಡಲಾಗಿದೆ. ಇದರಿಂದ ನಮಗೇನು ನಿರೀಕ್ಷೆ ಎಂದರೆ ಈ ರಾಜ್ಯದಲ್ಲಿ ಇರುವ ಬಹುಸಂಖ್ಯೆ ಲಿಂಗಾಯತ ಬಡವರಿಗೆ ನ್ಯಾಯ ಸಿಗುತ್ತೆ ಎನ್ನುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.








