ಎಲ್ಲರೂ ಬಸವಣ್ಣನ ಅನುಯಾಯಿಗಳಾದರೆ ಮಠಗಳ ಸ್ವಾಮೀಜಿಗಳ ನಡುವೆ ನಡೆಯುತ್ತಿರುವ ಗುದ್ದಾಟ ಇರುವುದಿಲ್ಲ ಎಂದು ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು. ಖಾಸಗಿ ಹೋಟೆಲ್ನ ಆವರಣದಲ್ಲಿ ಶಿವ ಶರಣರ ಸಮ್ಮೇಳನದ ಯಶಸ್ವಿಗೆ ಕಾರಣರಾದ ಡಾ. ಶಿವಮೂರ್ತಿ ಮುರುಘಾ ಶರಣರಿಗೆ ಸ್ವಾಗತ ಸಮಿತಿಯಿಂದ ಬುಧವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಜನರ ಅನುಭಾವದ ಹಂಬಲ ಮತ್ತು ಶರಣರ ಶಕ್ತಿ ಗಣಮೇಳವನ್ನು ಯಶಸ್ವಿಗೊಳಿಸಿದೆ. ಇದು ಬಸವಣ್ಣನಿಗೆ ಸಲ್ಲಿಸಿದ ನಿಜವಾದ ಗೌರವ ಎಂದರು.
ನಂತರ ಮಾತನಾಡಿದ ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ , ಪ್ರಮಥರ ಗಣಮೇಳದಲ್ಲಿ ಸರ್ವ ಶರಣರ ಅಭಿವೃದ್ಧಿಗೆ ಕೈಗೊಂಡ ನಿರ್ಣಯಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಈಡೇರಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು. ಮುರುಘಾ ಶರಣರು ಕೇವಲ ವ್ಯಕ್ತಿಯಲ್ಲ, ಒಂದು ಶಕ್ತಿಯಾಗಿದ್ದಾರೆ. ಎಲ್ಲ ಮಠಗಳ ಸಾವಿರಾರು ಶ್ರೀಗಳನ್ನು ಒಂದೆಡೆ ಸೇರಿಸಿದ ಹಿರಿಮೆ ಅವರದ್ದು. ಜಾತಿ, ಧರ್ಮದ ಭೇದವಿಲ್ಲದೆ ಎಲ್ಲ ಸಮುದಾಯದವರು ಪಾಲ್ಗೊಳ್ಳುವಂತೆ ಮಾಡಿದ್ದರು. ಸಂಸಾರದ ಜಂಜಾಟದಲ್ಲಿ ಸಿಲುಕಿದ ಸಾವಿರಾರು ಜನ ನೆಮ್ಮದಿಗಾಗಿ ಇಲ್ಲಿ ಸೇರಿದರು. ರಾಜಕಾರಣಿಗಳೂ ಪಕ್ಷ ಭೇದ ಮರೆತು ಇಲ್ಲಿ ಸೇರಿದ್ದರು. ಶ್ರೀಗಳ ಆಶೀರ್ವಾದ ತಂದೆ ಯಡಿಯೂರಪ್ಪ ಅವರ ಮೇಲೆ ಇದ್ದು ರಾಜ್ಯದ ಅಭಿವೃದ್ಧಿಗೆ ಶ್ರೀಗಳು ಪರೋಕ್ಷವಾಗಿ ಸಹಕಾರ ನೀಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಅಧ್ಯಕ್ಷ ಡಾ.ಎಂ ವೆಂಕಟಸ್ವಾಮಿ. ಹಿರಿಯ ಸಾಹಿತಿ ಡಾ. ಎಲ್.ಎಸ್. ಮುಕುಂದರಾಜು. ಶಾಸಕ ಟಿ ರಘುಮೂರ್ತಿ, ರಾಜುಕುಮಾರ್ ಪಾಟೀಲ್, ಈ ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.
ವಕ್ಫ್ ಭೂ ಕಬಳಿಕೆ ವಿರುದ್ಧದ ಹೋರಾಟಕ್ಕೆ ಮಣಿದ ಸರ್ಕಾರ : ಸಮಿತಿ ರಚನೆಗೆ ಒಪ್ಪಿಗೆ – ಆರ್. ಆಶೋಕ್
ವಕ್ಫ್ ಮಂಡಳಿ ಹಿಂದೂಗಳು ಮತ್ತು ರೈತರ ಆಸ್ತಿ ಕಬಳಿಕೆ ಮಾಡುತ್ತಿರುವ ಬಗ್ಗೆ ಸದನದಲ್ಲಿ ದಾಖಲೆ ಸಮೇತ ಮಾತನಾಡಿದ್ದೇನೆ. ಈ ಹೋರಾಟದಲ್ಲಿ ಬಿಜೆಪಿಗೆ ತಕ್ಕ ಮಟ್ಟಿನ ಜಯ ದೊರಕಿದೆ....