ಯತ್ನಾಳ್ ಬಗ್ಗೆ ನಾನೇನು ಮಾತನಾಡುವುದಿಲ್ಲ : ಬೊಮ್ಮಾಯಿ
ಹುಬ್ಬಳ್ಳಿ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕೇವಲ ಹಿಂದು ಹಬ್ಬಗಳಿಂದಲೇ ಕೊರೊನಾ ಹರಡುತ್ತಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ನನಗೆ ಗುಂಡು ಹೊಡೆಯುವದಾದ್ರೆ ಹೊಡೆದು ಹಾಕಿ. ಆದ್ರೆ ಗಣೇಶ ಚತುರ್ಥಿಯನ್ನು ವಿಜೃಂಬಣೆಯಿಂದ ನಾವು ಆಚರಿಸುತ್ತೇವೆ ಎಂಬ ಯತ್ನಾಳ್ ಹೇಳಿಕೆಗೆ ಬೊಮ್ಮಾಯಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಅವರ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ, ಈ ಬಗ್ಗೆ ಅವರನ್ನೇ ಕೇಳಿ ಎಂದರು. ಸೆ.3ರಂದು ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆ ಹಿನ್ನಲೆಯಲ್ಲಿ ಹುಬ್ಬಳ್ಳಿಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ನಾನು ಹೆಚ್ಚು ಮಾತನಾಡುವುದಿಲ್ಲ ಎಂದು ಜಾರಿಕೊಂಡರು.
ಇನ್ನು ನಿನ್ನೆ ವಿಜಯಪುರದಲ್ಲಿ ಯತ್ನಾಳ್ ಮಾತನಾಡುತ್ತಾ, ಕೇವಲ ಹಿಂದು ಹಬ್ಬಗಳಿಂದಲೇ ಕೊರೊನಾ ಹರಡುತ್ತಾ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ ನನಗೆ ಗುಂಡು ಹೊಡೆಯುವದಾದ್ರೆ ಹೊಡೆದು ಹಾಕಿ. ಆದ್ರೆ ಗಣೇಶ ಚತುರ್ಥಿಯನ್ನು ವಿಜೃಂಬಣೆಯಿಂದ ನಾವು ಆಚರಿಸುತ್ತೇವೆ.
ಕೊರೊನಾದ ಹೆಸರಲ್ಲಿ ನಿಬರ್ಂಧನೆಗಳು ಕೇವಲ ಗಣೇಶ ಚತುರ್ಥಿಗೆ ಮೀಸಲಾಗಿವೆ. ಬೇರೆ ಹಬ್ಬಗಳಿಗೆ ಅದು ಅನ್ವಯ ಆಗೋದಿಲ್ಲವಾ? ಕೇವಲ ಹಿಂದು ಹಬ್ಬಗಳಿಂದಲೇ ಕೊರೊನಾ ಹರಡುತ್ತಾ ಎಂದು ಪ್ರಶ್ನಿಸಿದ್ದಾರೆ.









