`ಬಿಜೆಪಿಗೆ ಜೆಡಿಎಸ್ ಬೆಂಬಲ’ದ ಬಗ್ಗೆ ಬಸವರಾಜ ಹೊರಟ್ಟಿ ಸ್ಪಷ್ಟನೆ
ಬೆಂಗಳೂರು : ಸದನದಲ್ಲಿ ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡಿದರ ಬಗ್ಗೆ ಭಾರಿ ಚರ್ಚೆ ಆಗುತ್ತಿದ್ದು, ಈ ಬಗ್ಗೆ ಜೆಡಿಎಸ್ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ಸ್ಪಷ್ಟನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದ ಹೊರಗಿನ ವಿಚಾರ ಬೇರೆ, ಸದನದ ಒಳಗಿನ ವಿಚಾರ ಬೇರೆ ಎಂದರು. ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಬಿಜೆಪಿಗೆ ಬೆಂಬಲ ನೀಡುವ ಬಗ್ಗೆ ಒಪ್ಪಿದ್ದಾರೋ ಇಲ್ಲವೋ ಗೊತ್ತಿಲ್ಲ.
ಆದ್ರೆ ನಾವು ಸದನದಲ್ಲಿ ನಡೆಯುತ್ತಿರುವ ವಿಷಯದಲ್ಲಿ ವಿಷಯಾಧಾರಿತವಾಗಿ ಬೆಂಬಲ ನೀಡಬೇಕಾಗುತ್ತದೆ. ಹಾಗಾಗಿ ವಿಷಯಾಧಾರಿತವಾಗಿ ಬಿಜೆಪಿಗೆ ಬೆಂಬಲ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಇಂದಿನ ಪರಿಷತ್ ಕಲಾಪದ ಬಗ್ಗೆ ಮಾತನಾಡಿ, ಸಭಾಪತಿ ಸದನವನ್ನು ಸರಿಯಾಗಿ ನಡೆಸಿಲ್ಲ. ಸಭಾಪತಿಯಾದವರು ಸಂವಿಧಾನದ ರೀತಿ ನೀತಿಯಂತೆ ನಡೆದುಕೊಳ್ಳಬೇಕು.
ಬಿಜೆಪಿಯವರು ಕೊಟ್ಟ ಪತ್ರ ಸರಿಯಿಲ್ಲ ಎಂದು ಹೇಳಬಾರದು. ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ ಮೇಲೆ ಅದರ ಮೇಲೆ ಚರ್ಚೆ ಮಾಡಿ ಇತಿಶ್ರೀ ಹಾಡಬೇಕು. ಸಭಾಪತಿಗಳು ತಮ್ಮ ಮನಸ್ಸಿಗೆ ಬಂದಹಾಗೆ ಸದನ ನಡೆಸಬಾರದು ಎಂದರು.
ಇನ್ನು ಇಂದು ಪರಿಷತ್ ಕಲಾಪ ಕರೆದಿದ್ದೇ ತಪ್ಪು. ಸದನದ ನಿಯಮದ ಪ್ರಕಾರ ಕರೆಯುವಂತಿಲ್ಲ. ಸರ್ಕಾರ ಹೇಳಿದಂತೆ ಕಾರ್ಯದರ್ಶಿ ಕೇಳಿದ್ದು ತಪ್ಪು.
ಸಂಪುಟದಲ್ಲಿ ಸರ್ಕಾರ ಸಭೆಯನ್ನು ತೀರ್ಮಾನಿಸುತ್ತದೆ. ಸಭೆ ಕರೆದ ಮೇಲೆ ಅದು ಸಭಾಪತಿಗಳಿಗೆ ಸೇರುತ್ತದೆ. ಬಿಎಸಿ ಸಭೆಯಲ್ಲೂ ತೀರ್ಮಾನವಾಗಿದೆ. ಸಭಾಪತಿಗಳು ಕಲಾಪ ಕರೆದಿದ್ದು ತಪ್ಪು ಎಂದು ಬೇಸರ ಹೊರಹಾಕಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









