ಸಿಎಂ ಬೊಮ್ಮಾಯಿಗೆ ಸಂಪುಟ ಸಂಕಷ್ಟ
ಬೆಂಗಳೂರು : ಮುಖ್ಯಮಂತ್ರಿಯಾಗಿ ಆರು ತಿಂಗಳು ಪೂರೈಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಂಪುಟ ಸಂಕಷ್ಟ ತೀವ್ರವಾಗಿ ಕಾಡುತ್ತಿದೆ. basavaraja-bommai-cabinet expansion karnataka
ಮೇಲ್ನೋಟ ಎಲ್ಲವೂ ಓಕೆ ಓಕೆ ಎನ್ನುತ್ತಿರುವ ಬೊಮ್ಮಾಯಿ, ಸಚವಾಕಾಂಕ್ಷಿಗಳ ಮಧ್ಯೆ ಸಿಲುಕಿ ಒದ್ದಾಡುತ್ತಿದ್ದಾರೆ.
ಮಂತ್ರಿಗಿರಿ ಆಕಾಂಕ್ಷಿಗಳ ಒತ್ತಾಯಕ್ಕೆ ಮಣಿದಿರುವಂತೆ ಕಾಣುತ್ತಿರುವ ಬೊಮ್ಮಾಯಿ, ಇಂದು ದೆಹಲಿ ದಂಡಯಾತ್ರೆ ಮಾಡಲು ನಿರ್ಧರಿಸಿದ್ದರಂತೆ.
ಆದ್ರೆ ಕೆಲ ಸಂಸದರ ಸೂಚನೆ ಮೇರೆಗೆ ಸೋಮವಾರ ದೆಹಲಿಗೆ ಹೋಗಲು ನಿರ್ಧರಿಸಿದ್ದಾರಂತೆ.
ಸದ್ಯ ಪಂಚ ರಾಜ್ಯ ಚುನಾವಣೆಯಲ್ಲಿ ಬ್ಯುಸಿಯಾಗಿರುವ ಬಿಜೆಪಿ ಬಿಗ್ ಬಾಸ್ ಗಳು ಬೊಮ್ಮಾಯಿಗೆ ಇನ್ನೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ.
ಪಟ್ಟು ಬಿಡದ ಆಕಾಂಕ್ಷಿಗಳು..
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತತ್ವಕ್ಕೆ ಬಂದಾಗಿನಿಂದಲೂ ಸಚಿವಾಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದೆ.
ಅದರಲ್ಲೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಆಪ್ತ, ಎಂ.ಪಿ.ರೇಣುಕಾಚಾರ್ಯ ಸರ್ಕಾರ ರಚನೆಯಾಗಿನಿಂದಲೂ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುತ್ತಲೇ ಇದ್ದಾರೆ.
ಇನ್ನೇನು ರಾಜ್ಯದ ಸಾರ್ವತ್ರಿಕ ಚುನಾವಣೆಗೆ ಒಂದು ವರ್ಷ ಬಾಕಿ ಇರುವ ಈ ಸಂದರ್ಭದಲ್ಲಿ ರೇಣುಕಾಚಾರ್ಯ, ನನಗೆ ಮಂತ್ರಿ ಸ್ಥಾನ ಬೇಕೇಬೇಕು ಎಂದು ಕುಳಿತಿದ್ದಾರೆ.
ಇತ್ತ ರಮೇಶ್ ಜಾರಕಿಹೊಳಿ ಕೂಡ ದೆಹಲಿಯತ್ತ ಮುಖಮಾಡುವ ಸಾಧ್ಯತೆಗಳಿವೆ. ಇತ್ತ ಯತ್ನಾಳ್ ಕೂಡ ಬಜೆಟ್ ಗೂ ಮುನ್ನ ಸಂಪುಟ ವಿಸ್ತರಣೆ ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ.









