Basavaraja Bommai | ರಾಜಕೀಯ ಅಸ್ತಿತ್ವಕ್ಕಾಗಿ ಭಾರತ್ ಜೋಡೋ ಯಾತ್ರೆ
ವಿಜಯಪುರ : ಕಾಂಗ್ರೆಸ್ ರಾಜಕಾರಣಕ್ಕಾಗಿ, ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಭಾರತ್ ಜೋಡೋ ಯಾತ್ರೆ ನಡೆಸುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಇಂದು ರಾಜ್ಯ ಪ್ರವೇಶಿಸಿದೆ.
ಈ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದು, ಹಿಂದೆ ಕಾಂಗ್ರೆಸ್ ಭಾರತ ತೋಡೋ ಮಾಡಿದೆ.
ಎರಡು ದೇಶಗಳನ್ನ ಬೇರ್ಪಡಿಸಿ ಭಾರತ್ ತೋಡೋ ಮಾಡಿದೆ.
ಈಗ ಕಾಂಗ್ರೆಸ್ ಜೋಡೋ ಯಾತ್ರೆ ಮಾಡ್ತಿರೋದು ವಿಪರ್ಯಾಸ ಎಂದು ಹೇಳಿದ್ದಾರೆ.

ಸಮಾಜದಲ್ಲಿ ಕಾಂಗ್ರೆಸ್ ಕ್ಷೋಭೆ ಉಂಟು ಮಾಡಿದೆ.
ಭಾರತ ಒಡೆದ ಗಾಯದ ಬರೆಯನ್ನ ಯಾರು ಯಾರು ಮರೆತಿಲ್ಲ.
ಅವರೀಗ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ.
ರಾಜಕಾರಣಕ್ಕಾಗಿ, ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ.
ಒಳ ಮರ್ಮ ಮುಚ್ಚಿಕೊಳ್ಳಲು ಕಾಂಗ್ರೆಸ್ ಭಾರತ್ ಜೋಡೋ ಹೆಸರು ಬಳಕೆ ಮಾಡುತ್ತಿದೆ.
ಅವರಿಗೂ ಭಾರತ್ ಜೋಡೋಗೂ ಸಂಬಂಧವೇ ಇಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.







