Hijab controvercy : ಹಿಜಾಬ್ ವಿವಾದದ ವಿರುದ್ಧ ಕ್ರಮದ ಬಗ್ಗೆ ಸಿಎಂ ಬೊಮ್ಮಾಯಿ ಬೆಳಗಾವಿಯಲ್ಲಿ ಪ್ರತಿಕ್ರಿಯೆ
ಬೆಳಗಾವಿ : ಹಿಜಾಬ್ ವಿವಾದದ ಹಿಂದಿರುವ ಸಂಘಟನೆಗಳ ಮೇಲೆ ಕ್ರಮ ವಿಚಾರವಾಗಿ ಬೆಳಗಾವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯೆ ನೀಡಿದ್ದಾರೆ… ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಈಗಾಗಲೇ ಕೇಸ್ ಕೋರ್ಟನಲ್ಲಿದೆ. ಡೇ ಟು ಡೇ ಹಿಯರಿಂಗ್ ಆಗ್ತಿದೆ, ಮಧ್ಯಂತರ ಆದೇಶ ಬಂದಿದೆ.
ನಮ್ಮ ಮೊದಲನೇ ವಿಚಾರ ರಾಜ್ಯದಲ್ಲಿ ಶಾಂತಿ ನೆಲೆಸಬೇಕು, ಮಕ್ಕಳಲ್ಲಿ ಯಾವುದೇ ಭಿನ್ನಾಭಿಪ್ರಾಯ ಮೂಡದಂತೆ ಶಾಲಾ ಕಾಲೇಜು ಪ್ರಾರಂಭ ಮಾಡಬೇಕು, ಹೈಕೋರ್ಟ್ ಕೂಡ ಇದನ್ನೇ ಹೇಳಿದೆ ಎಂದಿದ್ದಾರೆ..
ಇದೇ ವೇಳೆ ಎರಡು ವಿಚಾರಕ್ಕೆ ರಕ್ಷಣಾ ಸಚಿವರನ್ನ ಭೇಟಿಯಾಗಿದ್ದೆ. ಬೆಳಗಾವಿ ಸಮೀಪದ 750 ಎಕರೆ ಡಿಫೆನ್ಸ್ ಹುಲ್ಲುಗಾವಲಿನ ವಿಚಾರವಾಗಿ ಚರ್ಚಿಸಿದ್ದೇನೆ, ಮಾಹಿತಿ ತರಿಸಿಕೊಂಡು ಬೇಗನೆ ಒಂದು ನಿರ್ಣಯ ಮಾಡ್ತೀವಿ ಎಂದಿದ್ದಾರೆ.
ಸಂಗೊಳ್ಳಿಯಲ್ಲಿ ನಿರ್ಮಾಣ ಮಾಡಿರುವ ಸಂಗೊಳ್ಳಿ ರಾಯಣ್ಣ ಶಾಲೆಯನ್ನು ಮಿಲಿಟರಿ ಶಾಲೆ ಮಾಡಬೇಕೆಂದು ಮನವಿ ಮಾಡಿದ್ದೆ. ನಾನು ಬೆಂಗಳೂರಿಗೆ ಬಂದ ಮರುದಿನವೇ ಕರೆ ಮಾಡಿದ್ರು
ಈಗಾಗಲೇ ಈ ಕುರಿತು ಇನ್ಸಪೆಕ್ಷನ್ ಮಾಡಲಾಗಿದೆ, ಆದಷ್ಟು ಬೇಗ ಅದರ ಪರವಾಗಿ ನಿರ್ಣಯ ಮಾಡಲಾಗುವುದು ನಿರೀಕ್ಷಿಸಿ ಎಂದಿದ್ದಾರೆ.