ಬೊಮ್ಮಾಯಿ ಸಿಎಂ ಆಗಿದ್ದು ವಿಜಯೇಂದ್ರರನ್ನ ಸಿಎಂ ಮಾಡೋಕೆ : ಅಸ್ನೋಟಿಕರ್
ಕಾರವಾರ : ಬಸವರಾಜ್ ಬೊಮ್ಮಾಯಿ ಸಿಎಂ ಮಾಡಿರುವುದು ಭವಿಷ್ಯದಲ್ಲಿ ವಿಜಯೇಂದ್ರರನ್ನ ಸಿಎಂ ಮಾಡುವುದಕ್ಕಾಗಿ ಎಂದು ಕಾರವಾರದಲ್ಲಿ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಮಾತನಾಡಿದ ಅವರು, ಬೊಮ್ಮಾಯಿ ಆಯ್ಕೆಯಿಂದ ಬಿ.ಎಸ್.ಯಡಿಯೂರಪ್ಪ ಹಿಡಿತ ಸಾಧಿಸಿದ್ದಾರೆ.
ಸೂಪರ್ ಸಿಎಂ ಆಗಿ ಯಡಿಯೂರಪ್ಪ ಇನ್ನು ಮುಂದೆ ರಾಜ್ಯದಲ್ಲಿ ಅಧಿಕಾರ ಚಲಾಯಿಸುತ್ತಾರೆ. 2023 ಕ್ಕೆ ವಿಜಯೇಂದ್ರ ಸಿಎಂ ಮಾಡಲು ಬೊಮ್ಮಾಯಿಯನ್ನ ಈಗ ಸಿಎಂ ಮಾಡಿದ್ದಾರೆ ಎಂದು ದೂರಿದರು.
ಇನ್ನು ಯತ್ನಾಳ್, ಹಾಗೂ ಯೋಗೀಶ್ವರ್ ಐದಾರು ತಿಂಗಳಿನಿಂದ ಯಡಿಯೂರಪ್ಪ ವಿರುದ್ಧ ಮಾತನಾಡುತ್ತಿದ್ದರು. ಯತ್ನಾಳ್ ಬೋನಿನಲ್ಲಿ ಇದ್ದ ಮಂಗನ ರೀತಿ ಕೂಗಾಟ ಮಾಡಿದರೂ ಏನೂ ಮಾಡಿಕೊಳ್ಳಲಾಗಲಿಲ್ಲ.
ಬಿಜೆಪಿ ಶಿಸ್ತಿನ ಪಕ್ಷ ಆಗಿದ್ದರೆ ಅವರಿಬ್ಬರನ್ನ ಮಂತ್ರಿ ಮಾಡಬಾರದು. ಬಸವರಾಜ್ ಬೊಮ್ಮಾಯಿ ಸಿಎಂ ಆಗಿ ಬಿಜೆಪಿ ಮಾಡಿರುವುದು ಒಳ್ಳೆಯ ಆಯ್ಕೆ. ಇದರಿಂದ ಬಿಜೆಪಿಗೆ ಭವಿಷ್ಯದಲ್ಲಿ ಲಾಭವಾಗಲಿದೆ.
ರಾಜ್ಯಕ್ಕೆ ಒಳ್ಳೆಯ ದಿನ ಬರುತ್ತದೆ. ಈಗಿನ ಸರ್ಕಾರ ಬೆಳವಣಿಗೆ ಮುಂದೆ ಜೆಡಿಎಸ್ ಗೆ ಒಳ್ಳೆಯದಾಗಲಿದೆ. ಮುಂದಿನ ಬಾರಿ ಸರ್ಕಾರ ರಚನೆ ವೇಳೆ ಕುಮಾರಸ್ವಾಮಿ ದೊಡ್ಡ ರೋಲ್ ತೆಗೆದುಕೊಳ್ಳುತ್ತಾರೆ ಎಂದು ಅಭಿಪ್ರಾಯಪಟ್ಟರು.