1 ಗುಂಟೆಗೆ 100 ರೂ.. ಬೇಸಿಕ್ ಕಾಮನ್ ಸೆನ್ಸ್ ಇಲ್ವಾ ಸರ್ಕಾರಕ್ಕೆ..?
ಹುಬ್ಬಳ್ಳಿ : ಕೊರೊನಾದಿಂದ ತತ್ತರಿಸಿರುವವರಿಗೆ ರಾಜ್ಯ ಸರ್ಕಾರ ಬಿಡಿಗಾಸಿನ ಪರಿಹಾರ ಘೋಷಣೆ ಮಾಡಿದೆ.
ಅದರಲ್ಲಿ ತೋಟಗಾರಿಕೆಗೆ ತೋಟಗಾರಿಕೆಗೆ 10 ಸಾವಿರ ಘೋಷಣೆ ಮಾಡಿದೆ. ಇದು ಒಂದು ಗುಂಟೆಗೆ ನೂರು ರೂಪಾಯಿ ಆಯಿತು.
ಅದಕ್ಕೆ ಆರ್ಜಿ ಹಾಕೋಕೆ ಯಾರಾದ್ರು ಬರ್ತಾರಾ…? ಬೇಸಿಕ್ ಕಾಮನ್ ಸೆನ್ಸ್ ಇಲ್ವಾ ಸರ್ಕಾರಕ್ಕೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಲಸಿಕೆಗಾಗಿ ನಾವು 100 ಕೋಟಿ ಕೊಟ್ಟರೇ ಅದಕ್ಕೆ ಕೊಂಕು ಮಾತನಾಡುವ ಬಿಜೆಪಿಯವರು,
ಕೇವಲ 1200 ಕೋಟಿ ರೂಪಾಯಿ ಕೊರೊನಾ ಪರಿಹಾರ ಪ್ಯಾಕೇಜ್ ಕೊಟ್ಟು ಸಾಕಷ್ಟು ಬಿಲ್ಡಪ್ ತೆಗೆದುಕೊಳ್ಳುತ್ತಾರಲ್ಲಾ, ಆ 1200 ಕೋಟಿಯನ್ನು ಯಡಿಯೂರಪ್ಪ ತಮ್ಮ ಮನೆಯಿಂದ ಕೊಟ್ಟಿದ್ದಾ ಎಂದು ಪ್ರಶ್ನಿಸಿದರು.
ನಾವು ಈ ವಿಚಾರದಲ್ಲಿ ಪಾರದರ್ಶಕವಾಗಿರುತ್ತೇವೆ. ಆದ್ರೆ ಯಡಿಯೂರಪ್ಪನವರಿಗೆ ಈಗಲೂ ಕೇಳುತ್ತಿದ್ದೇವೆ. ಪರ್ಮಿಷನ್ ಕೊಡುತ್ತಿಲ್ಲ.
ನಮ್ಮ ಆದ್ಯತೆಯೂ ಎಲ್ಲರಿಗೂ ವ್ಯಾಕ್ಸಿನ್ ಕೊಡಬೇಕು ಎನ್ನೋದು ಇದೆ. ಕೇಂದ್ರ ಸರ್ಕಾರ ಎಲ್ಲರಿಗೂ ಲಸಿಕೆ ಕೊಡಬೇಕಿತ್ತು.
ಆದ್ರೆ ಸರ್ಕಾರ ಇದಿಯೊ ಇಲ್ವೋ ಎನ್ನೋದೆ ಗೊತ್ತಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.