BBC : ವಿಶ್ವದಲ್ಲೇ ಅತ್ಯಂತ ಬಕ್ವಾಸ್ ಕಾರ್ಪೊರೇಷನ್ ಎಂದ BJP
ಬಿಜೆಪಿ ವಕ್ತಾರ ಗೌರವ್ ಭಾಟಿಯಾ BBC ಸಂಸ್ಥೆಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.. BBC ಪ್ರಸ್ತುತ ವಿಶ್ವದ ಅತ್ಯಂತ ಬಕ್ವಾಸ್ ಹಾಗೂ ಭ್ರಷ್ಟ ಸಂಸ್ಥೆಯಾಗಿ ಮಾರ್ಪಾಡಾಗಿದೆ ಎಂದು ವಾಗ್ದಾಳಿ ನಡೆಸಿ್ದಾರೆ..
BBC ಯ ನವದೆಹಲಿಯ ಕಚೇರಿ ಮೇಲೆ ಐಟಿ ರೇಡ್ ನಡೆದಿರುವ ಬೆನ್ನಲ್ಲೇ ಇಂತಹ ಹೇಳಿಕೆ ನೀಡಿದ್ದಾರೆ..
ದುರದೃಷ್ಟವಶಾತ್, ಬಿಬಿಸಿಯ ಪ್ರಚಾರ ಮತ್ತು ಕಾಂಗ್ರೆಸ್ ಕಾರ್ಯಸೂಚಿಗಳು ಒಂದೇ ಆಗಿವೆ ಎಂದು ಕಿಡಿಕಾರಿದ್ದಾರೆ…
ದೆಹಲಿಯ ಬಿಬಿಸಿ ಸಂಸ್ಥೆಯ ಕಚೇರಿಯಲ್ಲಿ ಮಂಗಳವಾರ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದು, ತಪಾಸಣೆ ನಡೆಸುತ್ತಿದೆ.
ಭಾರತದಲ್ಲಿ ಕಾರ್ಯನಿರ್ವಹಿಸುವ ಯಾವುದೇ ಮಾಧ್ಯಮ ಸಂಸ್ಥೆಯು ದೇಶದ ನಿಯಮಗಳು ಮತ್ತು ನಿಬಂಧನೆಗಳನ್ನು ಕಡ್ಡಾಯವಾಗಿ ಅನುಸರಿಸಬೇಕಾಗುತ್ತದೆ.
ಆದಾಯ ತೆರಿಗೆ ಇಲಾಖೆಯು ಕಾನೂನುಬದ್ಧವಾಗಿ ಬಿಬಿಸಿ ಕಚೇರಿ ಮೇಲೆ
ದಾಳಿ ನಡೆಸಿದೆ ಎಂದಿದ್ದಾರೆ.
ಕಾಂಗ್ರೆಸ್ ಆಡಳಿತದಲ್ಲಿ ಸರ್ಕಾರಿ ಸಂಸ್ಥೆಗಳ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದಂತೆ ಐಟಿ ಇಲಾಖೆ ಈಗ ಪಂಜರದ ಗಿಳಿಯಾಗಿಲ್ಲ ಎಂದು ಗೌರವ್ ಭಾಟಿಯಾ ಹೇಳಿದ್ದಾರೆ.
BBC is number one bakwas and corrupt company in world : calls BJP








