BBMP : ಹೋಟೆಲ್, ರೆಸಾರ್ಟ್ ಮಾಲೀಕರಿಗೆ ಬಿಬಿಎಂಪಿ ಸಿಹಿಸುದ್ದಿ ನೀಡಿದ BBMP
BBMP ಹೋಟೆಲ್, ರೆಸಾರ್ಟ್ ಮಾಲೀಕರಿಗೆ ಬಿಬಿಎಂಪಿ ಸಿಹಿಸುದ್ದಿ ನೀಡಿದೆ.. ತೆರಿಗೆಯಲ್ಲಿ 50% ವಿನಾಯಿತಿ ನೀಡಲು ನಿರ್ಧಾರ ಮಾಡಿದೆ. ಕೋವಿಡ್ ನಿಂದ ನಷ್ಟಕ್ಕೊಳಗಾದ ಉದ್ಯಮಿಗಳಿಗೆ ಪಾಲಿಕೆ ಈ ಮೂಲಕ ಬಿಗ್ ರಿಲೀಫ್ ನೀಡ್ತಿದೆ..
ಹೋಟೆಲ್, ರೆಸ್ಟೋರೆಂಟ್, ರೆಸಾರ್ಟ್, ಮನೋರಂಜನಾ ಪಾರ್ಕ್ ಗಳಿಗೆ ತೆರಿಗೆ ವಿನಾಯಿತಿ ನೀಡುತ್ತಿದೆ.. 2021-22 ನೇ ಸಾಲಿನ ತೆರಿಗೆ ಪಾವತಿಗೆ ರಿಯಾಯಿತಿ ನೀಡುತ್ತಿದೆ.. ತೆರಿಗೆ ರಿಯಾಯಿತಿಗೆ ಕರ್ನಾಟಕ ಪ್ರವಾಸೋದ್ಯಮ ಸೌಲಭ್ಯಗಳ ಕಾಯ್ದೆಯಡಿ ನೋಂದಾಯಿಸಬೇಕು..
ಮಾಲೀಕರು 20-21 ನೇ ಸಾಲಿನವರೆಗೆ ಪೂರ್ಣ ತೆರಿಗೆ ಪಾವತಿಸಿದ್ದಲ್ಲಿ ಅರ್ಜಿ ಪರಿಗಣನೆಗೆ ತೆಗೆದುಕೊಳ್ಳಲಾಗುವುದು.. ಇದಕ್ಕಾಗಿ ಹಣಕಾಸು ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ.. ಐವರು ಸದಸ್ಯರ ಸಮಿತಿಯನ್ನ ಬಿಬಿಎಂಪಿ ರಚಿಸಿದೆ.
ಈ ಸಮಿತಿಯಿಂದ ಬಿಲ್, ಕ್ಲೇಮ್ ಗಳನ್ನು ಇಲಾಖೆಗೆ ಸಲ್ಲಿಸಲಾಗುತ್ತದೆ… ರಿಯಾಯಿತಿ ಮೊತ್ತ ಹಿಂಭರಿಸಲು ಆರ್ಥಿಕ ಇಲಾಖೆಗೆ ಸಲ್ಲಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ..








