BBMP ಎಲೆಕ್ಷನ್ ಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ – ಡಿ.31 ಕ್ಕೆ ಗಡುವು..
BBMP ಎಲೆಕ್ಷನ್ಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಡಿಸೆಂಬರ್ 31ರೊಳಗೆ ಎಲೆಕ್ಷನ್ ನಡೆಸಿ ಎಂದು ರಾಜ್ಯ ಸರ್ಕಾರಕ್ಕೆ ಗಡುವು ನೀಡಿದೆ.
ನ್ಯಾಯಮೂರ್ತಿ ಹೇಮಂತ್ ಚಂದನ್ಗೌಡರ್ ನೇತೃತ್ವದ ಕರ್ನಾಟಕ ಹೈಕೋರ್ಟ್ ೆಲೆಕ್ಷನ್ ಗೆ ಎರಡು ತಿಂಗಳು ಕಾಲಾವಕಾಶ ನೀಡಿದೆ. ನವೆಂಬರ್ 30ರಂದು ಮೀಸಲಾತಿ ಪಟ್ಟಿ ರಿಲೀಸ್ಗೆ ಸೂಚನೆ ನೀಡಿದೆ.
ರಾಜ್ಯ ಸರ್ಕಾರ 16 ವಾರಗಳ ಕಾಲಾವಕಾಶ ಕೇಳಿದ್ದು, ಹೈಕೋರ್ಟ್ ಎಂಟು ವಾರಗಳ ಕಾಲ ಅವಕಾಶ ನೀಡಿದೆ. ಹೈಕೋರ್ಟ್ OBC ಮೀಸಲಾತಿ ಪಟ್ಟಿ ರದ್ದು ಮಾಡಿದ್ದು, ಹೊಸ ಮೀಸಲಾತಿ ಪಟ್ಟಿ ರಚಿಸಲು ಸೂಚನೆ ನೀಡಿದೆ.
ಹೈಕೋರ್ಟ್ ತೀರ್ಪಿನ ಕುರಿತು ಪ್ರತಿಕ್ರಿಯಿಸಿದ ಕಂದಾಯ ಸಚಿವ R ಅಶೋಕ್ ಸರ್ಕಾರ ಬಿಬಿಎಂಪಿ ಎಲೆಕ್ಷನ್ಗೆ ಹಿಂದೇಟು ಹಾಕಿಲ್ಲ, ಶೀಘ್ರವೇ ಸಿಎಂ ಬೊಮ್ಮಾಯಿ ಜತೆ ಸಭೆ ಮಾಡುತ್ತೇವೆ. OBC ಮೀಸಲಾತಿ ಸಂಬಂಧ ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ.
BBMP Election: High Court Green Signal for BBMP Election – Deadline for December 31..








