ಬೆಂಗಳೂರು: ಕೊರೊನಾ ಸೋಂಕಿತರ ಮನೆ ಮುಂದೆ ಭಿತ್ತಿಪತ್ರ ಅಂಟಿಸುವುದನ್ನು ಕೈಬಿಡಲು ಬಿಬಿಎಂಪಿ ನಿರ್ಧರಿಸಿದೆ.
ಸೋಂಕಿತರ ಮನೆ ಮುಂದೆ ಭಿತ್ತಿಪತ್ರ ಅಂಟಿಸುವುದರಿಂದ ಹಾಗೂ ಬ್ಯಾರಿಕೇಡ್ ಹಾಕುವುದರಿಂದ, ಬ್ಯಾರಿಕೇಡ್ ಅಳವಡಿಸಿ ಸೀಲ್ಡೌನ್ ಮಾಡುವುದರಿಂದ ಅಕ್ಕಪಕ್ಕದವರು ಕೆಟ್ಟದಾಗಿ ನೋಡುವ ಪರಿಸ್ಥಿತಿ ಇದೆ. ಹೀಗಾಗಿ ಈ ಎರಡು ಕ್ರಮಗಳನ್ನು ಕೈಬಿಡಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಭಿತ್ತಿಪತ್ರ ಅಂಟಿಸುವ ಬದಲು ವ್ಯಕ್ತಿಗೆ ಸೋಂಕು ದೃಢಪಟ್ಟ ಬಗ್ಗೆ ಸುತ್ತಮುತ್ತಲಿನ ಮನೆಯವರಿಗೆ ಮಾಹಿತಿ ನೀಡಲಾಗುವುದು. ಈ ಬಗ್ಗೆ ಆದೇಶ ಹೊರಡಿಸಲು ಸರ್ಕಾರವನ್ನು ಕೋರಲಾಗಿದೆ ಎಂದು ಹೇಳಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ ಕಂಟೈನ್ಮೆಂಟ್ ಪ್ರದೇಶಗಳಲ್ಲಿ 100 ಮೀಟರ್ ವ್ಯಾಪ್ತಿಯಲ್ಲಿ ಒಂದೆರಡು ಪ್ರಕರಣ ಪತ್ತೆಯಾದರೆ ಅಂತಹ ಕಡೆ ಬ್ಯಾರಿಕೇಡ್ ಹಾಕಿ ಸೀಲ್ಡೌನ್ ಮಾಡುವುದಿಲ್ಲ. 3ಕ್ಕಿಂತ ಹೆಚ್ಚು ಪ್ರಕರಣಗಳು ಪತ್ತೆಯಾದರೆ ಅಂತಹ ಕಡೆ ಮಾತ್ರ ಬ್ಯಾರಿಕೇಡ್ ಅಳಡಿಸಲಾವುಗುದು ಎಂದು ಬಿಬಿಎಂಪಿ ತಿಳಿಸಿದೆ.








