ಕಸ ಹಾಕಕ್ಕೂ ಕೊಡ್ಬೇಕಂತೆ ಕಾಸು: ಇದೇನಿದು BBMP ಹೊಸ ರೂಲ್ಸ್..!
ಬೆಂಗಳೂರು : ಬಿಬಿಎಂಪಿ ಹೊಸ ಹೊಸ ನಿಯಮಗಳನ್ನ ತರುತ್ತಿರೋದಕ್ಕೆ ಜನರು ತಲೆಕೆಡಿಸಿಕೊಂಡು ಕುಳಿತಿರೋ ಹೊತ್ತಲ್ಲೇ ಮತ್ತೊಂದು ಶಾಕ್ ಕೊಟ್ಟಿದೆ. ಇನ್ಮುಂದೆ ಕಸ ಹಾಕೋಕ್ಕು ಬೆಂಗಳೂರು ಮಂದಿ ದುಡ್ಡು ಕೊಡ್ಬೇಕಂತೆ. ಹೌದು ಹೊಸ ವರ್ಷ ಆರಂಭ ಅಂದ್ರೆ ಜ.1ರಿಂದಲೇ ಬಿಬಿಎಂಪಿ ಜನರಿಂದ ಕಸಕ್ಕೆ ಶುಲ್ಕ ವಸೂಲಿ ಮಾಡಲಿದೆಯಂತೆ. ಒಟ್ನಲ್ಲಿ ಜನರನ್ನ ಹೈರಾಣಾಗಿಸುತ್ತಿರೋ ಬಿಬಿಎಂಪಿ ನೀರಿನ ಬಿಲ್, ಕರೆಂಟ್ ಬಿಲ್ ಹೆಚ್ಚಿಸಿದ ಬೆನ್ನಲ್ಲೇ ಇದೀಗ ಕಸದಿಂದಲೂ ದುಡ್ಡು ಪೀಕುವ ಮಾಸ್ಟರ್ ಪ್ಲಾನ್ ಮಾಡಿ ಜನರ ಸಿಟ್ಟಿಗೆ ಗುರಿಯಾಗಿದೆ. ತಿಂಗಳಿಗೊಮ್ಮೆ ಬಿಬಿಎಂಪಿಗೆ ಕಸ ಹಾಕ್ಬೇಕಾದ್ರೆ ಕಾಸು ಕೊಡಲೇಬೇಕಂತೆ. ಪ್ರತಿ ಮನೆಗೆ ತಿಂಗಳಿಗೆ 200 ರೂಪಾಯಿ ಕಸದ ಶುಲ್ಕ ನಿಗದಿ ಪಡಿಸಲಾಗುತ್ತಿದೆ. ಅಷ್ಟೇ ಅಲ್ಲ ಸ್ವಾಮಿ ಕಾಲಿ ಸೈಟಿದ್ರು ಶುಲ್ಕ ಕಟ್ಲೇ ಬೇಕಂತೆ.
ಇನ್ನೂ ವಸತಿ ಕಟ್ಟಡದ 1000 ಚದರಡಿಗೆ 10 ರೂ, ವಸತಿ ಕಟ್ಟಡದ 1001 ರಿಂದ 3000 ಚದರಡಿಗೆ 30 ರೂ, ವಸತಿ ಕಟ್ಟಡದ 3000ಕ್ಕೂ ಮೇಲ್ಪಟ್ಟ ಚದರಡಿಗೆ 50 ರೂ, ವಾಣಿಜ್ಯ ಕಟ್ಟಡದ 1000 ಚದರಡಿಗೆ 50 ರೂ, ಕೈಗಾರಿಕಾ ಕಟ್ಟಡದ 1000 ಚದರಡಿಗೆ 50 ರೂ, ವಾಣಿಜ್ಯ ಕಟ್ಟಡದ 1001 ರಿಂದ 5000 ಚದರಡಿಗೆ 100 ರೂ, ವಾಣಿಜ್ಯ ಕಟ್ಟಡದ 5000ಕ್ಕೂ ಮೇಲ್ಪಟ್ಟ ಚದರಡಿಗೆ 200 ರೂ, ಕೈಗಾರಿಕಾ ಕಟ್ಟಡದ 1001ರಿಂದ 5000 ಚದರಡಿಗೆ 200 ರೂ, ಕೈಗಾರಿಕಾ ಕಟ್ಟಡದ 5000ಕ್ಕೂ ಮೇಲ್ಪಟ್ಟ ಚದರಡಿಗೆ 300 ರೂಪಾಯಿ ಕಟ್ಬೇಕಂತೆ.. ಹೊಸ ವರ್ಷದಿಂದಲೇ ಈ ನಿಯಮ ಜಾರಿಯಾಗಲಿದೆ ಎನ್ನಲಾಗ್ತಿದ್ದು, ಈ ಮೂಲಕ ಬಿಬಿಎಂಪಿ ಜನರನ್ನ ಮತ್ತಷ್ಟು ಸಂಕಟಕ್ಕೆ ದೂಡುತ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








