BBMP
ಬೆಂಗಳೂರು : ರಾಜ್ಯದಲ್ಲಿ ಒಂದೆಡೆ ಕೊರೋನಾ ಹಾವಳಿಯಿಂದಾಗಿ ಜನರು ಸ್ವಲ್ಪ ಸ್ವಲ್ಪವೇ ಚೇತರಿಸಿಕೊಳ್ಳುತ್ತಿದ್ದಾರೆ. ಸೋಂಕಿನ ಪ್ರಕರಣಗಳು ಕ್ರಮೇಣವಾಗಿ ಇಳಿಮುಖವಾಗುತ್ತಿದೆ. ಮತ್ತೊಂದೆಡೆ ರಾಜ್ಯದಲ್ಲಿ ಉಪಸಮರದ ಕಾವು ರಂಗೇರುತ್ತಿದೆ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಹಾಗೂ ಶಿರಾ ಕ್ಷೇತ್ರ ಚುನಾವಣಾ ಕಣ ರಂಗೇರ್ತಿದೆ. ಇದೇನು ಚುನಾವಣೆಗೂ ಕೊರೊನಾಗೂ ಏನ್ ಸಂಬಂಧ ಅಂದುಕೊಂಡ್ರಾ. ಸಂಬಂಧ ಇದೆ..! ಯಾಕಂದ್ರೆ ಚುನಾವಣಾ ಮತದಾನದ ಕುರಿತು ಬಿಬಿಎಂಪಿ ಇದೀಗ ಮಹತ್ವದ ನಿರ್ಧಾರ ಕೈಗೊಂಡಿದೆ. ಅದೇನೆಂದ್ರೆ ರಾಜರಾಜೇಶ್ವರಿನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಕೊರೊನಾ ಸೋಂಕಿತರಿಗೂ ಮತದಾನಕ್ಕೆ ಅವಕಾಶ ನೀಡಲಾಗುತ್ತಿದೆ.
ಹೌದು.. ಈ ಕುರಿತು ಪ್ರತಿಕ್ರಿಯಿಸಿರುವಂತ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ರಾಜರಾಜೇಶ್ವರಿನಗರ ಉಪ ಚುನಾವಣೆ ಕ್ಷೇತ್ರದಲ್ಲಿ 1177 ಕೊರೊನಾ ಸೋಂಕಿತರಿದ್ದಾರೆ. ನವೆಂಬರ್ 3ರಂದು ನಡೆಯಲಿರುವ ಮತದಾನಕ್ಕೆ ಕೊರೊನಾ ಸೋಂಕಿತರಿಗೂ ಮತ ಚಲಾಯಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ಕೊರೊನಾ ಭೀತಿಯ ನಡುವೆಯೂ ನಡೆದ ಪರೀಕ್ಷೆಗಳಲ್ಲಿ ಕೊರೊನಾ ಸೋಂಕಿತರಿಗೂ ಪರೀಕ್ಷೆಗೆ ಅವಕಾಶ ನೀಡಲಾಗಿತ್ತು. ಇದರಂತೆಯೇ ಇದೀಗ ಬೆಂಗಳೂರು ನಗರ ಕ್ಷೇತ್ರದ ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಕೊರೊನಾ ಸೋಂಕಿತರಿಗೂ ಮತ ಚಲಾಯಿಸಲು ಅವಕಾಶ ನೀಡಲಾಗುತ್ತಿದೆ.
ಆರೋಗ್ಯ ಸೇತು ಆ್ಯಪ್ ಯಾವುದೇ ಗೊಂದಲವಿಲ್ಲ – ಮೈಗೋವ್ ಸಿಇಒ

BBMP
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








