“ಕನಕಪುರ ಬಂಡೆ”ಗೆ ಸಖತ್ ಟಾಂಗ್ ಕೊಟ್ಟ “ಕೌರವ”..!
ಹಾನಗಲ್ ಗೆಲವು 2023 ರ ಆರಂಭ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಬಿ ಸಿ ಪಾಟೀಲ್ ಅವರು ಹಾಗಾದ್ರೆ ಸಿಂಧಗಿ ಆರಂಭ ಅಲ್ವಾ. ಅಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲು ಕಂಡಿದೆ. ಅದು ಆರಂಭಾನಾ, ಅದು ಅಂತ್ಯ ತಾನೆ..
ಬಸವರಾಜ್ ಬೊಮ್ಮಾಯಿವರು ಮುಖ್ಯಮಂತ್ರಿಗಳಾಗಿ ಮೂರು ತಿಂಗಳು ಆಗಿದೆ. ಈ ವೇಳೆ ಆಕಸ್ಮಿಕವಾಗಿ ಚುನಾವಣೆ ಬಂತು. ಇದು ಜನರ ತಿರ್ಪು ಇದನ್ನು ಒಪ್ಪಿಕೊಳ್ಳುತ್ತೇನೆ. ಇದನ್ನೆ ದೊಡ್ಡದೆಂದು ಬೀಗುವ ಅವಶ್ಯಕತೆ ಇಲ್ಲಾ. ಈ ಹಿಂದೆ ಅವರೇ ಹೇಳಿದವರು ಇದು ದಿಕ್ಸೂಚಿ ಅಲ್ಲಾ ಅಂತಾ. ಆದರೆ ಈಗ ಈ ಚುನಾವಣೆ ದಿಕ್ಸೂಚಿ ಅಂತಿದಾರೆ. ಸಿಂಧಗಿ ದಿಕ್ಸೂಚಿ ಅಲ್ವಾ ಹಾಗಾದ್ರೆ ಎಂದು ಪ್ರಶ್ನಿಸಿದ್ದಾರೆ.