BC Patil
ಸಂಪುಟ ವಿಸ್ತರಣೆ ಸಿಎಂ ಪರಮಾಧಿಕಾರಕ್ಕೆ ಬಿಟ್ಟ ವಿಚಾರ: ಬಿ.ಸಿ.ಪಾಟೀಲ್
ಕೊಪ್ಪಳ: ಸಿಎಂ ಯಡಿಯೂರಪ್ಪನವರ ದೆಹಲಿ ಪ್ರವಾಸ ಮುಗಿಯುತ್ತಿದ್ದಂತೆ ಸಂಪುಟ ವಿಸ್ತರಣೆ ಗೊಂದಲ ಹೆಚ್ಚಾಗಿದೆ. ನಾನಾ ಬಗೆಯ ಚರ್ಚೆಗಳಿಗೆ ದಾರಿದೀಪವಾಗಿದೆ. ಇದೀಗ ಈ ಬಗ್ಗೆ ಸಚಿವ ಬಿ.ಸಿ ಪಾಟೀಲ್ ಅವರು ಮಾತನಾಡಿದ್ದು, ಸಂಪುಟ ವಿಸ್ತರಣೆ, ಪುನಾರಚನೆ ಮುಖ್ಯಮಂತ್ರಿಗಳ ಪರಮಾಧಿಕಾರವಾಗಿದ್ದು, ಈ ಸಂಬಂಧ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ ಎಂದಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ.ಪಾಟೀಲ್ ಅವರು, ಶಾಸಕರೆಲ್ಲರಿಗೂ ಸಚಿವರಾಗಬೇಕು ಎನ್ನುವ ಆಸೆ ಇರೋದು ಸಹಜ. ಇದರಲ್ಲಿ ತಪ್ಪೇನಿಲ್ಲ. ಈ ನಿರ್ಧಾರ ಪಕ್ಷದ ವರಿಷ್ಠಿರಿಗೆ ಬಿಟಗಟಿದ್ದು ಎಂದಿದ್ದಾರೆ. ಇದೇ ವೇಳೆ ಸರ್ಕಾರ ಮರಾಠ ಅಭಿವೃದ್ಧಿ ನಿಗಮ ಹಾಗೂ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಗಳಿಗೆ ಆದೇಶ ಮಾಡಿರುವುದು ಸ್ವಾಗತಾರ್ಹವಾಗಿದ್ದು, ಇದರಿಂದ ಮರಾಠ ಹಾಗೂ ವೀರಶೈವ ಲಿಂಗಾಯತ ಸಮುದಾಯಗಳ ಹಿಂದುಳಿದವರಿಗೆ ಬಡವರಿಗೆ ಅನುಕೂಲವಾಗಲಿದೆ. ಇದು ಮರಾಠಿ ಭಾಷೆ ಪ್ರಾಧಿಕಾರ ಇದಲ್ಲ. ಕರ್ನಾಟಕದಲ್ಲಿರುವ ಮರಾಠಿಗರನ್ನು ಕರ್ನಾಟಕ ಬಿಟ್ಟು ಕಳುಹಿಸಲಾಗುವುದಿಲ್ಲ. ಮರಾಠರ ಅಭಿವೃದ್ಧಿಗಾಗಿ ಸರ್ಕಾರ ನಿಗಮ ಮಾಡಿದ್ದು ಸ್ವಾಗತಾರ್ಹ. ಅದರಂತೆ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಮಾಡಿದ್ದು ಸಹ ಸರಿಯಾಗಿದೆ.
ಈಗಲೂ , ಮುಂದೆಯೂ ಗೆಲುವು ಬಿಜೆಪಿಯದ್ದೇ ಎಂದ ನಳಿನ್ ಕಟೀಲ್..!
ರಾಜ್ಯದಲ್ಲಿ ವೀರಶೈವ ಲಿಂಗಾಯತ ದೊಡ್ಡ ಸಮುದಾಯವಾಗಿದ್ದರೂ ಈ ಸಮುದಾಯದಲ್ಲಿ ಬಡವರು ಹಿಂದುಳಿದವರು ಇದ್ದಾರೆ. ನಿಗಮ ರಚನೆಯಿಂದ ಇವರಿಗೆ ಅನುಕೂಲವಾಗಲಿದೆ. ಇದೇ ರೀತಿ ಮರಾಠ ಅಭಿವೃದ್ಧಿ ನಿಗಮದಿಂದ ಮರಾಠಿಗರಲ್ಲಿರುವ ಬಡವರಿಗೆ ಹಿಂದುಳಿದವರಿಗೂ ಕೂಡ ಅನುಕೂಲವಾಗಲಿದೆ. ಕುಂಬಾರ ಅಭಿವೃದ್ಧಿ ನಿಗಮ, ವಿಶ್ವಕರ್ಮ ಅಭಿವೃದ್ಧಿ ನಿಗಮ, ಬ್ರಾಹ್ಮಣ ನಿಗಮ, ಅಲ್ಪಸಂಖ್ಯಾತರಿಗೂ ನಿಗಮವಿದೆ ಎಂದಿದ್ದಾರೆ.
BC Patil
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel