BC Patil | ಬಿಜೆಪಿನೇ ಬೇಕು ಅಂತಾ ಜನ ತೀರ್ಮಾನಿಸಿದ್ದಾರೆ
ಕಲಬುರಗಿ : ಬಿಜೆಪಿನೇ ಬೇಕು ಅಂತ ಈಗಾಗಲೇ ಜನ ತೀರ್ಮಾನಿಸಿದ್ದಾರೆ ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಜನಪರ ಕೆಲಸ ಮಾಡಿ ಇಲ್ಲಾಂದ್ರೆ ಜಾಗ ಖಾಲಿ ಮಾಡಿ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮೈಸೂರಿನಲ್ಲಿ ಬಿ.ಸಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಸಿದ್ದರಾಮಯ್ಯನವರನ್ನ ಜನ ಈಗಾಗಲೇ ಒಂದ್ಕಡೆ ಖಾಲಿ ಮಾಡಿಸಿದ್ದಾರೆ. ಆ ಭಾಗ್ಯ ಈ ಭಾಗ್ಯ ಕೊಟ್ಟಿದ್ದೀನಿ ಅಂದ್ರೂ ಜನ ಜಾಗ ಖಾಲಿ ಮಾಡಿಸಿದ್ದಾರೆ.
ನಮ್ಮ ಸರ್ಕಾರವೇ ಹಲವಾರು ಜನಪರ ಯೋಜನೆಗಳನ್ನ ಕೊಟ್ಟಿದೆ. ಈ ಕಾಂಗ್ರೆಸ್ ನವರು ನಮಗೇನು ಜಾಗ ಖಾಲಿ ಮಾಡಿಸೋದು. ಬಿಜೆಪಿನೇ ಬೇಕು ಅಂತ ಈಗಾಗಲೇ ಜನ ತೀರ್ಮಾನಿಸಿದ್ದಾರೆ ಎಂದು ಹೇಳಿದ್ದಾರೆ.
ಗುತ್ತಿಗೆದಾರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಪರ್ಸಂಟೇಜ್ ಆರೋಪದ ಬಗ್ಗೆ ಮಾತನಾಡಿ, ಯಾರೋ ಒಬ್ಬ ತಲೆಪಟ್ಟಿ ಇಲ್ಲದ ನೀಡಿದ ಆಧಾರ ರಹಿತ ಹೇಳಿಕೆ ಇದು.
ಇಂತಹ ಹೇಳಿಕೆಗೆ ಯಾರು ಇಂಪಾರ್ಟೆನ್ಸ್ ಕೊಡಬಾರದು. ಇದು ಕಾಂಗ್ರೆಸ್ ಪಾರ್ಟಿಯ ಸ್ಪನ್ಸರ್ ಪ್ರೋಗ್ರಾಮ್. ಸಿದ್ದರಾಮಯ್ಯನವರ ಮನೆಗೆ ಹೋಗಿ ಬಂದು ಈ ರೀತಿ ಹೇಳಿಕೆ ಕೊಡುತ್ತಾನೆ.
ಕಳೆದ ಬಂದು ವಾರದಲ್ಲಿ ಸಿದ್ದರಾಮಯ್ಯನವರ ಇಮೇಜ್ ಪೂರ್ತಿ ಡೌನ್ ಆಗಿದೆ. ಅದನ್ನ ಪರಿಪಡಿಸುವುದಕ್ಕೋಸ್ಕರ ಕೆಂಪಣ್ಣನ ಮನೆಗೆ ಕರೆಸಿಕೊಂಡು ಈ ರೀತಿ ಹೇಳಿಕೆ ಕೊಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.