ಅಪ್ಪುಗೆ ಪದ್ಮಶ್ರೀ ಪ್ರಶಸ್ತಿ ನೀಡಲು ಕೇಂದ್ರಕ್ಕೆ ರಾಜ್ಯ ಸರ್ಕಾರದಿಂದ ಶಿಫಾರಸು : ಬಿ.ಸಿ ಪಾಟೀಲ್
ಹಾವೇರಿ : ನಟ ಪುನೀತ್ ಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂಬ ವಿಚಾರವಾಗಿ ಕೃಷಿ ಸಚಿವ ಬಿಸಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಹಿರೆಕೇರೂರು ತಾಲೂಕಿನ ಅಬಲೂರು ಗ್ರಾಮದಲ್ಲಿ ಮಾತನಾಡಿ ನಟ ಪುನೀತ್ ಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂಬ ವಿಚಾರ,, ನಾನು ಪುನೀತ್ ಅವರ ಅಭಿಮಾನಿ ಆಗಿ ಹೇಳುತ್ತೇನೆ. ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದ ಪರವಾಗಿ ಶಿಪಾರಸ್ಸು ಮಾಡಬೇಕು.
ಅವರ ಕಲಾ ಸೇವಗೆ ಸಮಾಜಸೇವೆಗೆ ಕೊಡಬೇಕು. ಪುನೀತ್ ಅವರಿಗೆ ಇದ್ದಾಗಲೆ ಪದ್ಮಶ್ರೀ ಪ್ರಶಸ್ತಿ ಕೊಡಬೇಕಿತ್ತು. ಈಗ ಅವರು ಇಲ್ಲಾ ಅಂತಾ ಹೇಳೊಕೆ ನನ್ನ ಮನಸ್ಸು ಒಪ್ಪುತ್ತಿಲ್ಲಾ. ವಿಧಾನಸಭೆಯಲ್ಲೊ ಎಲ್ಲರೂ ಒಟ್ಟಾಗಿ ಇದರ ಬಗ್ಗೆ ಚರ್ಚೆ ಮಾಡುತ್ತೇವೆ ಎಂದಿದ್ದಾರೆ.