Karnataka : ಅನ್ನದಾತರೊಂದಿಗೆ ಬಿ.ಸಿ.ಪಾಟೀಲರ ಅಂತರಾಳದ ಮಾತು
ಬೆಂಗಳೂರು : ತಮ್ಮ ಜನ್ಮದಿನವನ್ನು ರೈತರಿಗಾಗಿ ಮೀಸಲಿಟ್ಟಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್,ಇದೀಗ ಅನ್ನದಾತರೊಂದಿಗೆ ಅಂತರಾಳದ ಮಾತುಗಳನ್ನಾಡಲಿದ್ದಾರೆ.
National News : ಭಾರತದಲ್ಲಿ ಡ್ರೋನ್ ಆಮದು ನಿಷೇಧ.. ದೇಶೀಯ ತಯಾರಿಕೆಗೆ ಉತ್ತೇಜನ..
ಕೃಷಿ ಸಚಿವರಾಗಿ ಫೆ.11ಕ್ಕೆ ಬಿ.ಸಿ.ಪಾಟೀಲರು ಎರಡು ವರ್ಷವನ್ನು ಪೂರೈಸುತ್ತಿದ್ದಾರೆ.ಹೀಗಾಗಿ ಅನ್ನದಾತರ ಸೇವೆ ಮಾಡಲು ಅವಕಾಶವನ್ನು ನೀಡಿರುವ ಈ ಫೆ.11ರ ನಾಳೆಯ ದಿನವನ್ನು ಉಸ್ತುವಾರಿ ಜಿಲ್ಲೆ ಚಿತ್ರದುರ್ಗದಲ್ಲಿ ಅನ್ನದಾತರೊಂದಿಗೆ ಕಳೆಯಲು ನಿರ್ಧರಿಸಿದ್ದಾರೆ.ಚಿತ್ರದುರ್ಗ ಜಿಲ್ಲೆಯ ಭರಮಸಾಗರದ ಬೇಡರ ಶಿವನಕೆರೆ ರೈತ ಗಿರೀಶ್ ಅವರ ಜಮೀನಿನಲ್ಲಿ ಕಳೆಯಲಿದ್ದು,ಅನ್ನದಾತರೊಂದಿಗೆ ಅಂತರಾಳದ ಮಾತುಗಳನ್ನಾಡಲಿದ್ದಾರೆ.ಬಳಿಕ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ.








