ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ : ದೇಸಿ ಕ್ರಿಕೆಟ್ ಗೆ ಮುಹೂರ್ತ ಫಿಕ್ಸ್
ಮುಂಬೈ : ಜನವರಿ 5 ರಿಂದ ದೇಶಿ ಕ್ರಿಕೆಟ್ ಸಂಭ್ರಮ ಶುರುವಾಗಲಿದೆ. ನವೆಂಬರ್ 16ರಂದು ಪ್ರಾರಂಭವಾಗಬೇಕಿದ್ದ ಈ ಋತುವಿನ ರಣಜಿ ಟ್ರೋಫಿಯನ್ನ ಜನವರಿ 5ಕ್ಕೆ ಮುಂದೂಡಲಾಗಿದೆ.
ರಣಜಿ ಟ್ರೋಫಿಯನ್ನು ಒಟ್ಟು 38 ತಂಡಗಳು ಸೆಣಸಾಡಲಿದ್ದು, ಜನವರಿ 5ರಂದು ಪ್ರಾರಂಭಗೊಂಡು ಮಾರ್ಚ್ 20ರಂದು ಮುಕ್ತಾಯಗೊಳ್ಳಲಿದೆ.
ಇದಕ್ಕು ಮುನ್ನ ಅಂದ್ರೆ ಅಕ್ಟೋಬರ್ 27ರಿಂದ ಡಿಸೆಂಬರ್ 29ರವರೆಗೆ 50 ಓವರ್ ಗಳ ವಿಜಯ ಹಜಾರೆ ಟ್ರೋಫಿ ಹಾಗೂ 20 ಓವರ್ ಗಳ ಸಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರೀಡಾಕೂಟ ನಡೆಯಲಿವೆ.
ಸಯದ್ ಮುಷ್ತಾಕ್ ಅಲಿ ಟ್ರೋಫಿ ಅಕ್ಟೋಬರ್ 27ರಿಂದ ನವೆಂಬರ್ 22ರವರೆಗೆ ನಡೆಯಲಿದೆ.
ವಿಜಯ್ ಹಜಾರೆ ಟ್ರೋಫಿ ಡಿಸೆಂಬರ್ 1ರಿಂದ ಡಿಸೆಂಬರ್ 29ರವರೆಗೆ ನಡೆಯಲಿದೆ. ಅಲ್ಲದೆ ಸಿಕೆ ನಾಯ್ಡು ಟ್ರೋಫಿ ಪಂದ್ಯಾವಳಿ ಜನವರಿ 6ರಿಂದ ಏಪ್ರಿಲ್ 2ರವರೆಗೆ ನಡೆಯಲಿದೆ.
ಇನ್ನು ಮಹಿಳಾ ಏಕದಿನ ಕ್ರಿಕೆಟ್ ಪಂದ್ಯಾವಳಿಯು ಅಕ್ಟೊಬರ್ 20ರಂದು ಆರಂಭವಾಗಲಿದೆ. ಅದಾದ ಬಳಿಕ ಚಾಲೆಂಜರ್ ಟ್ರೋಫಿ ನಡೆಯಲಿದೆ.