
ಮುಂಬರುವ ಆಗಸ್ಟ್‍ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ-ಟ್ವೆಂಟಿ ಸರಣಿಯ ಬಗ್ಗೆ ಉಭಯ ದೇಶಗಳ ಕ್ರಿಕೆಟ್ ಮಂಡಳಿಗಳು ಚರ್ಚೆ ಮಾಡುತ್ತಿವೆ. ಅಲ್ಲದೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ನಿರ್ದೇಶಕ ಗ್ರೇಮ್ ಸ್ಮಿತ್ ಈ ಸರಣಿ ನಡೆಸಲು ಬಿಸಿಸಿಐ ಒಪ್ಪಿಗೆ ನೀಡಿದೆ ಎಂದು ಹೇಳಿದ್ದರು. ಆದ್ರೆ ಇದಕ್ಕೆ ಪ್ರತಿಕ್ರಿಯಿಸಿರುವ ಬಿಸಿಸಿಐನ ಕೋಶಾಧಿಕಾರಿ ಅರುಣ್ ಧೂಮಾಲ್, ಈ ಬಗ್ಗೆ ಮಾತುಕತೆಗಳು ಮತ್ತು ಟೂರ್ನಿಯನ್ನು ಸಂಘಟಿಸುವ ಕುರಿತಂತೆ ಚರ್ಚೆ ನಡೆದಿದೆ. ಆದ್ರೆ ಬಿಸಿಸಿಐ ಇನ್ನೂ ಒಪ್ಪಿಗೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ಕೊರೋನಾ ವೈರಸ್‍ನಿಂದಾಗಿ ದಕ್ಷಿಣ ಆಫ್ರಿಕಾದ ಭಾರತ ಪ್ರವಾಸ ರದ್ದುಗೊಂಡಿದೆ. ಹೀಗಾಗಿ ನಾವು ಭಾರತದ ದಕ್ಷಿಣ ಆಫ್ರಿಕಾ ಪ್ರವಾಸದ ಟಿ-ಟ್ವೆಂಟಿ ಸರಣಿ ನಡೆಸುವ ಬಗ್ಗೆ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಆದ್ರೆ ದಕ್ಷಿಣ ಆಫ್ರಿಕಾ ಸರಣಿಯ ಬಗ್ಗೆ ನಾವು ಇನ್ನೂ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಅರುಣ್ ಧುಮಾಲ್ ಹೇಳಿದ್ದಾರೆ.
ಮುಂಬರುವ ಜುಲೈನಲ್ಲಿ ಭಾರತ ಶ್ರೀಲಂಕಾ ಪ್ರವಾಸವನ್ನು ಕೈಗೊಳ್ಳಬೇಕಿತ್ತು. ಆ ನಂತರ ಜಿಂಬಾಬ್ವೆ ವಿರುದ್ಧ ಟಿ-ಟ್ವೆಂಟಿ ಸರಣಿಯನ್ನು ಆಡಬೇಕಾಗಿತ್ತು. ಆದ್ರೆ ಈ ಸರಣಿಯ ಬಗ್ಗೆಯೂ ನಾವು ಯಾವ ತೀರ್ಮಾನವನ್ನು ತೆಗೆದುಕೊಂಡಿಲ್ಲ. ಆದ್ರಿಂದ ದಕ್ಷಿಣ ಆಫ್ರಿಕಾ ಸರಣಿಯ ಬಗ್ಗೆ ಈಗ ಏನು ಹೇಳಲು ಸಾಧ್ಯ ಅಂತ ಅರುಣ್ ಪ್ರಶ್ನೆ ಮಾಡುತ್ತಿದ್ದಾರೆ.
ಇನ್ನು ಗ್ರೇಮ್ ಸ್ಮಿತ್ ಗಂಗೂಲಿ ಐಸಿಸಿ ಮುಖ್ಯಸ್ಥರಾಗಬೇಕು ಅನ್ನೋ ಗ್ರೇಮ್ ಸ್ಮಿತ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸ್ಮಿತ್, ಅದು ಗ್ರೇಮ್ ಸ್ಮಿತ್ ಅವರ ವೈಯಕ್ತಿಕ ಅಭಿಪ್ರಾಯ. ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ಹೇಳಿಕೆಯಲ್ಲ. ಒಂದು ವೇಳೆ ಗಂಗೂಲಿ ಅಧ್ಯಕ್ಷರಾದ್ರೆ ಒಳ್ಳೆಯದ್ದೆ. ಆದ್ರೂ ಬಿಸಿಸಿಐನಲ್ಲಿ ಈ ಕುರಿತಂತೆ ಯಾವುದೇ ಚರ್ಚೆ ನಡೆದಿಲ್ಲ ಎಂದರು.
ಅದೇ ರೀತಿ ಐಪಿಎಲ್‍ಗಾಗಿ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಮುಂದೂಡುವಂತೆ ಬಿಸಿಸಿಐ ಒತ್ತಡ ಹೇರುತ್ತಿಲ್ಲ. ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿ ಜಾಗತೀಕ ಸ್ಪರ್ಧೆ. ಆದ್ರಿಂದ ಈ ಬಗ್ಗೆ ಐಸಿಸಿ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದ್ರು








