ADVERTISEMENT
Tuesday, February 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಪಾಕ್ ಕ್ರಿಕೆಟ್ ಮಂಡಳಿಗೆ ಶಾಕ್ ನೀಡಿದ ಸೌರವ್ ಗಂಗೂಲಿ

admin by admin
July 9, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಪಾಕ್ ಕ್ರಿಕೆಟ್ ಮಂಡಳಿಗೆ ಶಾಕ್ ನೀಡಿದ ಸೌರವ್ ಗಂಗೂಲಿ

ಕ್ರಿಕೆಟ್ ವಿಚಾರದಲ್ಲೂ ಅಷ್ಟೇ.. ಭಾರತ ಪಾಕಿಸ್ತಾನವನ್ನು ಕ್ಯಾರೇ ಮಾಡುತ್ತಿಲ್ಲ. ಈಗಾಗಲೇ ಭಾರತ ಸರ್ಕಾರ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಪಾಕಿಸ್ತಾನವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಇದೀಗ ಬಿಸಿಸಿಐ ಸರದಿ. ವಿಶ್ವ ಕ್ರಿಕೆಟ್ ನ ದೊಡ್ಡಣ್ಣ ಖ್ಯಾತಿಯ ಬಿಸಿಸಿಐ ಪಾಕ್ ಕ್ರಿಕೆಟ್ ಮಂಡಳಿಯನ್ನು ಕೇಳದೇ ಏಕಾಏಕಿ ತೀರ್ಮಾನವನ್ನು ತೆಗೆದುಕೊಂಡಿದೆ.
ಹೌದು, 2020ರ ಏಷ್ಯಾಕಪ್ ಟೂರ್ನಿ ರದ್ದುಗೊಂಡಿದೆ ಎಂದು ಬಿಸಿಸಿಐ ಅಧ್ಯಕ್ಷರಾದ ಸೌರವ್ ಗಂಗೂಲಿ ಹೇಳಿದ್ದಾರೆ. ಸೆಪ್ಟಂಬರ್ ನಲ್ಲಿ ನಡೆಯಬೇಕಿದ್ದ ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಿತ್ತು. ಆದ್ರೆ ಪಾಕ್ ಆತಿಥ್ಯ ವಹಿಸಿದ್ರೆ ಟೀಮ್ ಇಂಡಿಯಾ ಟೂರ್ನಿಯಲ್ಲಿ ಆಡುವುದು ಅನುಮಾನವಾಗಿತ್ತು. ಉಭಯ ರಾಷ್ಟ್ರಗಳ ನಡುವಿನ ರಾಜಕೀಯ ಭಿನ್ನಾಭಿಪ್ರಾಯಗಳಿಂದ ಭಾರತ ಪಾಕ್ ನೆಲದಲ್ಲಿ ಆಡಲು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಏಷ್ಯಾಕಪ್ ಟೂರ್ನಿಯನ್ನು ತಟಸ್ಥ ತಾಣದಲ್ಲಿ ನಡೆಸಲು ಚಿಂತನೆ ಮಾಡಿತ್ತು. ಈ ನಡುವೆ, ಶ್ರೀಲಂಕಾ ಕ್ರಿಕೆಟ್ ಮಂಡಳಿ ಏಷ್ಯಾಕಪ್ ಟೂರ್ನಿಯನ್ನು ಆಯೋಜಿಸಲು ಮುಂದೆ ಬಂದಿತ್ತು.
ಇದೆಲ್ಲದರ ನಡುವೆ ಗಂಗೂಲಿ ಏಷ್ಯಕಪ್ ಟೂರ್ನಿ ರದ್ದುಗೊಂಡಿದೆ ಎಂದು ಖಾಸಗಿ ಲೈವ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಈ ನಡುವೆ, ಐಸಿಸಿಯು ಮುಂಬರುವ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯ ಬಗ್ಗೆ ಇನ್ನೂ ಅಂತಿಮ ತೀರ್ಮಾನವನ್ನು ತೆಗೆದುಕೊಂಡಿಲ್ಲ. ಸದ್ಯದ ಸ್ಥಿತಿಯಲ್ಲಿ ಟಿ-ಟ್ವೆಂಟಿ ಟೂರ್ನಿ ನಡೆಯುವುದು ಅನುಮಾನವಾಗಿದೆ. ಅದೇ ರೀತಿ ಸೆಪ್ಟಂಬರ್ -ಅಕ್ಟೋಬರ್- ನವೆಂಬರ್ ನಲ್ಲಿ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಆಯೋಜನೆ ಮಾಡಲು ಪ್ಲಾನ್ ಮಾಡಿಕೊಳ್ಳುತ್ತಿದೆ. ಆದ್ರೆ ಕೋವಿಡ್ -19 ಸಾಂಕ್ರಮಿಕ ರೋಗದ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗಿರುವುದರಿಂದ ಈ ವರ್ಷ ಭಾರತದಲ್ಲಿ ಕ್ರಿಕೆಟ್ ಚಟುವಟಿಕೆಗಳು ನಡೆಯುವುದು ಕೂಡ ಅನುಮಾನವಾಗಿದೆ.
ಗಂಗೂಲಿ ಹೇಳಿಕೆಗೆ ಪ್ರತಿಕ್ರಿಯಿಸಿದ ಪಿಸಿಬಿ
ಇನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿಕೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪ್ರತಿಕ್ರಿಯಿಸಿದೆ. ಪಿಸಿಬಿಯ ಮಾಧ್ಯಮ ನಿರ್ದೇಶಕರಾದ ಸಮಿಯುಲ್ ಹಸನ್ ಬರ್ನಿ ಅವರು, ಗಂಗೂಲಿ ಹೇಳಿಕೆಗೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ. 2020ರ ಏಷ್ಯಾಕಪ್ ಟೂರ್ನಿಯ ಭವಿಷ್ಯವನ್ನು ನಿರ್ಧಾರ ಮಾಡುವುದು ಏಷ್ಯನ್ ಕ್ರಿಕೆಟ್ ಸಮಿತಿ. ಹೀಗಾಗಿ ಏಷ್ಯನ್ ಕ್ರಿಕೆಟ್ ಸಮಿತಿಯ ಅಧ್ಯಕ್ಷರಾದ ನಝ್ಮುಲ್ ಹಸನ್ ಅವರು ಈ ಬಗ್ಗೆ ನಿರ್ಧಾರವನ್ನು ಪ್ರಕಟಿಸುತ್ತಾರೆ. ಮುಂದಿನ ಎಸಿಸಿ ಸಭೆಯಲ್ಲಿ ಏಷ್ಯಾಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟವಾಗಲಿದೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಗಂಗೂಲಿ ಹೇಳಿಕೆಯನ್ನು ಗಮನಿಸಿದಾಗ ಭಾರತ ಏಷ್ಯಾಕಪ್ ಟೂರ್ನಿಯಲ್ಲಿ ಆಡುತ್ತಿಲ್ಲ. ಬದಲಾಗಿ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಸಂಘಟಿಸುವತ್ತ ಹೆಚ್ಚಿನ ಗಮನ ಹರಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ.

Related posts

Just one betel leaf is enough. See how you can pay off even if you have a debt of lakhs, if not crores!

ಒಂದು ವೀಳ್ಯದೆಲೆ ಇದ್ದರೆ ಸಾಕು. ಲಕ್ಷ ಅಲ್ಲ ಕೋಟಿ ಸಾಲ ಇದ್ದರೂ ಕೂಡ ತೀರಿಸಬಹುದು ಹೇಗೆ ಅಂತ ನೋಡಿ.!

February 3, 2026
Hey..Pak..! You can't win me... You know what you're doing... Stop playing the hypocritical game..!

ಹೇ..ಪಾಕ್..! ನನ್ನ ನೀನು ಗೆಲ್ಲಲಾರೆ… ತಿಳಿದು ತಿಳಿದು ಛಲವೇತಕೆ…ಕಪಟ ನಾಟಕವನ್ನು ಬಿಟ್ಟು ಬಿಡು..!

February 3, 2026
Tags: accasia cup 2020bcciICCIPLpakistan cricket boardPCBt-20 world cup 2020team india
ShareTweetSendShare
Join us on:

Related Posts

Just one betel leaf is enough. See how you can pay off even if you have a debt of lakhs, if not crores!

ಒಂದು ವೀಳ್ಯದೆಲೆ ಇದ್ದರೆ ಸಾಕು. ಲಕ್ಷ ಅಲ್ಲ ಕೋಟಿ ಸಾಲ ಇದ್ದರೂ ಕೂಡ ತೀರಿಸಬಹುದು ಹೇಗೆ ಅಂತ ನೋಡಿ.!

by admin
February 3, 2026
0

ಜ್ಯೋತಿಷ್ಯ ಶಾಸ್ತ್ರವು ಒಬ್ಬ ಮನುಷ್ಯನ ಹುಟ್ಟಿನಿಂದ ಸಾ’ವಿ’ನ ತನಕ ಬರುವ ಆತನ ಪಾಲಿಗೆ ಬರುವ ಕ’ಷ್ಟ, ಸುಖ, ದುಃ’ಖ ಗಂಡಾಂತರಗಳ ಬಗ್ಗೆ ಮಾಹಿತಿ ಕೊಡುತ್ತದೆ. ಇದು ನಮ್ಮ...

Hey..Pak..! You can't win me... You know what you're doing... Stop playing the hypocritical game..!

ಹೇ..ಪಾಕ್..! ನನ್ನ ನೀನು ಗೆಲ್ಲಲಾರೆ… ತಿಳಿದು ತಿಳಿದು ಛಲವೇತಕೆ…ಕಪಟ ನಾಟಕವನ್ನು ಬಿಟ್ಟು ಬಿಡು..!

by admin
February 3, 2026
0

ಭರತ ಖಂಡದಲ್ಲಿ ದಾಯಾದಿಗಳ ಕದನ ಇನ್ನು ನಿನ್ನೆಯದಲ್ಲ. ಮಹಾಭಾರತದ ಕುರುಕ್ಷೇತ್ರದಿಂದ ಇಂದಿನ ಗಡಿ ವಿವಾದದ ತನಕದ ಇತಿಹಾಸವನ್ನು ನೋಡಿದಾಗ ದಾಯಾದಿ ಕಲಹ ಬಿಡಿಸಲಾಗದ ಒಗ್ಗಟ್ಟಿನಂತಿದೆ. ಅದು ರಾಜ್ಯವಂಶಸ್ಥರು...

Carrying these two items while going to the temple of the ancestral deity can help us move to the next stage of progress in our lives

ಕುಲದೇವರ ದೇವಸ್ಥಾನಕ್ಕೆ ಹೋಗುವಾಗ ಈ ಎರಡು ವಸ್ತುಗಳನ್ನು ಹೊತ್ತುಕೊಂಡರೆ ನಮ್ಮ ಜೀವನದಲ್ಲಿ ಮುಂದಿನ ಪ್ರಗತಿಯ ಹಂತಕ್ಕೆ ಹೋಗಬಹುದು.

by admin
February 3, 2026
0

ಜೀವನ ಯಶಸ್ಸಿನ ಕುಲದೈವಂ ಹೂಗಳು ಈ ಜಗತ್ತಿನಲ್ಲಿ ಹುಟ್ಟಿದ ಯಾರಾದರೂ ಪ್ರತಿ ಸೆಕೆಂಡ್ ಮತ್ತು ಪ್ರತಿ ದಿನವೂ ಯಾವುದಾದರೊಂದು ರೂಪದಲ್ಲಿ ಸ್ವಲ್ಪ ಪ್ರಗತಿಯನ್ನು ಸಾಧಿಸಬೇಕು. ಸೂಕ್ತ ಪ್ರಯತ್ನಗಳು...

ನಾಯಕರ ಮುಂದೆ ಗ್ಲಾಮರಸ್ ಆಗಿ ಕಾಣಲು ಹೋಗಬೇಡಿ: ಮೋಟಮ್ಮ ಖಡಕ್ ವಾರ್ನಿಂಗ್

ನಾಯಕರ ಮುಂದೆ ಗ್ಲಾಮರಸ್ ಆಗಿ ಕಾಣಲು ಹೋಗಬೇಡಿ: ಮೋಟಮ್ಮ ಖಡಕ್ ವಾರ್ನಿಂಗ್

by Shwetha
February 3, 2026
0

ಮಂಗಳೂರು: ರಾಜಕೀಯದಲ್ಲಿ ಮಹಿಳೆಯರ ಸ್ಥಾನಮಾನ, ನಡವಳಿಕೆ ಹಾಗೂ ಪ್ರಸ್ತುತ ಸಮಾಜದಲ್ಲಿ ಹೆಣ್ಣುಮಕ್ಕಳ ಪಾಲನೆ ಕುರಿತಂತೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಮೋಟಮ್ಮ ಅವರು ನೀಡಿರುವ ಹೇಳಿಕೆ ಈಗ...

ದುಡ್ಡಿದ್ದವರಿಗೆ ಮಾತ್ರ ದರ್ಶನ ಕೊಡ್ತಾರಾ ಗಿಲ್ಲಿ ನಟ ಅತಿಯಾದ ಅಭಿಮಾನವೇ ಈಗ ಸೆಲೆಬ್ರಿಟಿಗೆ ಮುಳುವಾಯ್ತಾ!

ದುಡ್ಡಿದ್ದವರಿಗೆ ಮಾತ್ರ ದರ್ಶನ ಕೊಡ್ತಾರಾ ಗಿಲ್ಲಿ ನಟ ಅತಿಯಾದ ಅಭಿಮಾನವೇ ಈಗ ಸೆಲೆಬ್ರಿಟಿಗೆ ಮುಳುವಾಯ್ತಾ!

by Shwetha
February 3, 2026
0

ಬೆಂಗಳೂರು: ಅತಿಯಾದರೆ ಅಮೃತವೂ ವಿಷ ಎನ್ನುವ ಮಾತು ಅಕ್ಷರಶಃ ಸತ್ಯ. ಅದರಲ್ಲೂ ಅಭಿಮಾನದ ವಿಷಯದಲ್ಲಿ ಇದು ನೂರಕ್ಕೆ ನೂರರಷ್ಟು ಅನ್ವಯವಾಗುತ್ತದೆ. ಅಭಿಮಾನಿಗಳನ್ನು ದೇವರು ಎನ್ನುತ್ತಾರೆ, ಆದರೆ ಅದೇ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram