BCCI | ಭಾರತೀಯ ಕ್ರಿಕೆಟಿಗರಿಗೆ ಬಿಸಿಸಿಐ ಸಿಹಿಸುದ್ದಿ
ಭಾರತೀಯ ಕ್ರಿಕೆಟಿಗರಿಗೆ ಬಿಸಿಸಿಐ ಸಿಹಿಸುದ್ದಿ ನೀಡಿದೆ. ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಆಟಗಾರರ ಮಾನಸಿಕ ಒತ್ತಡಕ್ಕೆ ಕಾರಣವಾಗಿದ್ದ ಬಯೋ ಬಬಲ್ ನಿಯಮಗಳನ್ನು ತೆಗೆದುಹಾಕಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧರಿಸಿದೆಯಂತೆ.
ಬಬಲ್ ನಿಯಮಗಳಿಂದ ಆಟಗಾರರು ಮಾನಸಿಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಎಂಬ ಆರೋಪಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ದೇಶದಲ್ಲಿ ಕೋವಿಡ್ ಪ್ರಭಾವವೂ ಕ್ಷೀಣಿಸುತ್ತಿರುವುದರಿಂದ ಬಯೋ ಬಬಲ್ ನಿಯಮಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲು ಬಿಸಿಸಿಐ ಯೋಜಿಸಿದೆ.
ಈ ತಿಂಗಳಿನಿಂದಲೇ (ಏಪ್ರಿಲ್) ಆಟಗಾರರನ್ನು ಬಬಲ್ ನಿಯಮಗಳಿಂದ ಮುಕ್ತಗೊಳಿಸಲು ಬಿಸಿಸಿಐ ಮುಂದಾಗಿದೆ.
ಆದರೆ ಪ್ರಸ್ತುತ ಈ ಸೌಲಭ್ಯವು ದೇಶೀಯ ಕ್ರಿಕೆಟಿಗರಿಗೆ ಮಾತ್ರ ಲಭ್ಯವಿರುವುದಾಗಿ ತಿಳಿದು ಬಂದಿದೆ.
ಮುಂಬರುವ ಎರಡು ದೇಶೀಯ ಟೂರ್ನಿಗಳ ಹಿನ್ನಲೆಯಲ್ಲಿ ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದು ಬಂದಿದೆ.









