ಮುಂಬೈ: ವಿಶ್ವಕಪ್ ಬಳಿಕ ಟೀಂ ಇಂಡಿಯಾದಿಂದ ದೂರ ಉಳಿದಿರುವ ಕ್ರಿಕೆಟ್ ಬಾಹುಬಲಿ ಎಂಎಸ್ ಧೋನಿ ರೀ ಎಂಟ್ರಿ ಬಗ್ಗೆ ಬಿಸಿಸಿಐ ಖಡಕ್ ಸೂಚನೆ ಕೊಟ್ಟಿದೆ. ಅಕ್ಟೋಬರ್ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ರೇಸ್ ನಲ್ಲಿ ಎಂಎಸ್ ಧೋನಿ ನಿಲ್ಲಬೇಕಾದರೆ ಐಪಿಎಲ್ 2020ರ ಆವೃತ್ತಿಯಲ್ಲಿ ತಮ್ಮ ಸಾಮರ್ಥ್ಯವನ್ನು ನಿರೂಪಿಸಬೇಕು ಎಂದು ಆಯ್ಕೆ ಸಮಿತಿ ಸ್ಪಷ್ಟಪಡಿಸಿದೆ.
ಒಂದು ವೇಳೆ ಐಪಿಎಲ್ ನಲ್ಲಿ ಮಿಂಚಲು ಧೋನಿ ವಿಫಲವಾದ್ರೆ, ಎಂಎಸ್ ಡಿಯ ಮುಂದಿನ ಆಯ್ಕೆ ನಿವೃತ್ತಿ ಮಾತ್ರ ಎಂದು ಹೇಳಲಾಗುತ್ತಿದೆ. ಧೋನಿ ನಿವೃತ್ತಿ ಬಗ್ಗೆ ಕಳೆದ ಕೆಲ ವರ್ಷಗಳಿಂದ ಊಹಾಪೋಹಗಳು ಹರಿದಾಡುತ್ತಲೇ ಇವೆ. ಆದ್ರೆ ಧೋನಿ ಮಾತ್ರ ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಹೀಗಾಗಿ ಬಿಸಿಸಿಐ ಬಿಗ್ ಬಾಸ್ ಗಳು ಕ್ರಿಕೆಟ್ ರಣಧೀರನಿಗೆ ಐಪಿಎಲ್ ನಲ್ಲಿ ಸಾಮರ್ಥ್ಯ ಸಾಬೀತುಪಡಿಸಲೇಬೇಕೆಂದು ಷರತ್ತು ಹಾಕಿದ್ದಾರೆ.
ಇನ್ನು ಕನ್ನಡಿಗ ಸುನೀಲ್ ಜೋಶಿ ಕಳೆದ ವಾರ ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದು ಅವರ ಅಧ್ಯಕ್ಷತೆಯಲ್ಲಿ ಎಂಎಸ್ ಧೋನಿ ಕಮ್ ಬ್ಯಾಕ್ ಕುರಿತಂತೆ ಚರ್ಚೆಗಳು ನಡೆಯುತ್ತಿವೆ. ಟಿ-20 ವಿಶ್ವಕಪ್ ಗೆ ತಂಡವನ್ನು ಕಟ್ಟುವ ಉದ್ದೇಶದಿಂದ ಈಗಲೇ ಧೋನಿ ವಿಚಾರದಲ್ಲಿ ಯಾವುದಾದರೂ ಒಂದು ನಿರ್ಧಾರಕ್ಕೆ ಬರುವುದು ಸೂಕ್ತ ಎಂದು ಬಿಸಿಸಿಐ ಬಿಗ್ ಬಾಸ್ ಗಳು ನಿರ್ಧರಿಸಿದ್ದಾರೆ.
ಖೇಲ್ ಅಭಿ ಬಾಕಿ ಹೈ
ಒಂದು ಕಡೆ ಧೋನಿ ನಿವೃತ್ತಿ ಬಗ್ಗೆ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿದ್ದರೇ ಡಿ ಬಾಸ್ ಮಾತ್ರ ಎಂದಿನಂತೆ ಕೂಲ್ ಆಗಿದ್ದಾರೆ. ಎಂಎಸ್‌ಡಿ ಟೀಂ ಇಂಡಿಯಾದ ಮಾಸ್ಟರ್ ಪೀಸ್, ಯಾವುದೇ ಕ್ಷಣದಲ್ಲಾದ್ರೂ ಬೌನ್ಸ್ ಬ್ಯಾಕ್ ಆಗುವ ಚಾಣಕ್ಯ. ಮೈದಾನದಲ್ಲಿ ಒಂಟಿ ಸಲಗದಂತೆ ಹೋರಾಡಿ ಪಂದ್ಯವನ್ನು ಗೆಲ್ಲಿಸಿಕೊಡುವ ತಾಕತ್ತಿರುವ ದಾಂಡಿಗ. ಹೀಗಾಗಿ ಧೋನಿ ಬರೋದು ಲೇಟ್ ಆಗ್ಬೋದು ಆದ್ರೆ ಬರೋದ್ ಮಾತ್ರ ಪಕ್ಕಾ ಎನ್ನುತ್ತಿದ್ದಾರೆ ಕ್ರಿಕೆಟ್ ವಿಶ್ಲೇಷಕರು.
ಇನ್ನು ಈಗಿರುವ ಊಹಾಪೋಹಗಳಿಗೆ, ಗೊಂದಲಗಳಿಗೆ ಐಪಿಎಲ್ ನಲ್ಲೇ ಉತ್ತರ ನೀಡಲು ಈಗಾಗಲೇ ಧೋನಿ ತಯಾರಿ ಆರಂಭಿಸಿದ್ದಾರೆ. ಅಭ್ಯಾಸದ ವೇಳೆ ಐದು ಬಾಲ್ ಗೆ ಐದು ಸಿಕ್ಸರ್ ಸಿಡಿಸಿರುವ ಎಂಎಸ್ ಡಿ ಖೇಲ್ ಅಬಿ ಬಾಕಿ ಹೈ ಎಂದಿದ್ದಾರೆ. ಅಲ್ಲದೆ ತಮ್ಮ ಸಾಮರ್ಥ್ಯವನ್ನು ಪ್ರಶ್ನಿಸುತ್ತಿರುವವರಿಗೆ ಈ ಮೂಲಕ ಸ್ವೀಟ್ ವಾರ್ನಿಂಗ್ ನೀಡಿದ್ದಾರೆ.