Umran Malik : ಉಮ್ರಾನ್ ಮಲಿಕ್ ಪರ “ಕೈ” ನಾಯಕರು ಬ್ಯಾಟ್..
ಐಪಿಎಲ್-2022ರ ಭಾಗವಾಗಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವೇಗದ ಬೌಲರ್ ಉಮ್ರಾನ್ ಮಲಿಕ್ ಅದ್ಭುತ ಪ್ರದರ್ಶನ ನೀಡಿದರು.
ಈ ಪಂದ್ಯದಲ್ಲಿ ನಾಲ್ಕು ಓವರ್ ಎಸೆದ ಉಮ್ರಾನ್ ಮಲಿಕ್ 25 ರನ್ ನೀಡಿ ಐದು ವಿಕೆಟ್ ಪಡೆದರು.
ಈ ಮೂಲಕ ಅವರು ಕ್ಯಾಶ್ ರಿಚ್ ಲೀಗ್ನಲ್ಲಿ ಈ ಸಾಧನೆ ಮಾಡಿದ ಐದನೇ ಅನ್ಕ್ಯಾಪ್ ಆಟಗಾರರಾದರು.
ಹೀಗಾಗಿ ಸಾಕಷ್ಟು ಮಂದಿ ಉಮ್ರಾನ್ ಮಲಿಕ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇವರಲ್ಲಿ ರಾಜಕೀಯ ಗಣ್ಯರು ಸೇರಿದ್ದು, ಉಮ್ರಾನ ಮಲಿಕ್ ಆಟಕ್ಕೆ ಫಿದಾ ಆಗಿರುವ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಕೆ. ಚಿದಂಬರಂ, ಈ ಜಮ್ಮು ಮತ್ತು ಕಾಶ್ಮೀರದ ಬೌಲರ್ ನ ಪ್ರದರ್ಶನವನ್ನು ಗಗನಕ್ಕೇರಿಸಿದ್ದಾರೆ.
“ಉಮ್ರಾನ್ ಮಲಿಕ್ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ತೀಕ್ಷ್ಣವಾದ ವೇಗದಲ್ಲಿ ಆಕ್ರಮಣಶೀಲತೆಯನ್ನು ಪ್ರದರ್ಶಿಸುವುದು ಮತ್ತು ಎದುರಾಳಿಗಳಿಗೆ ಭಯ ಹುಟ್ಟಿಸುತ್ತಿದ್ದಾರೆ.
ಮಲಿಕ್ ಅವರನ್ನು ಆದಷ್ಟು ಬೇಗ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಬೇಕು ಎಂದು ಬಿಸಿಸಿಐಗೆ ಮನವಿ ಮಾಡಿಕೊಂಡಿದ್ದಾರೆ.
ಅಲ್ಲದೇ ಉಮ್ರಾನ್ ಗೆ ಪ್ರತ್ಯೇಕ ಕೋಚ್ ಅನ್ನು ನೇಮಿಸಿ ಎಂದು ವಿನಂತಿಸಿಕೊಂಡಿದ್ದಾರೆ.
The Umran Malik hurricane is blowing away everything in its way
The sheer pace and aggression is a sight to behold
After today’s performance there can be no doubt that he is the find of this edition of IPL
— P. Chidambaram (@PChidambaram_IN) April 27, 2022
ಶಶಿ ತರೂರ್ ಕೂಡ ಟ್ವೀಟ್ ಮಾಡಿ, ‘‘ಅತ್ಯುತ್ತಮ ಪ್ರತಿಭೆ. ಇಂಗ್ಲೆಂಡ್ ಜೊತೆಗಿನ ಸರಣಿಗೆ ಅವರನ್ನು ಆಯ್ಕೆ ಮಾಡಿ.
ಬುಮ್ರಾ ಜೊತೆಗೆ ಉಮ್ರಾನ್ ಬ್ರಿಟಿಷ್ ಆಟಗಾರರನ್ನು ಬೇಟೆಯಾಡುತ್ತಾರೆ ಎಂದು ಬರೆದುಕೊಂಡಿದ್ದಾರೆ. bcci-should-give-umran-exclusive-coach