VIRAT KOHLI | ಇದು ಯಾವ ನ್ಯಾಯ ಸ್ವಾಮಿ… ಕೊಹ್ಲಿ ಬಗ್ಗೆ ಈ ಧೋರಣೆ ಯಾಕೆ..?
ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಹಾಲಿ ನಾಯಕ ರೋಹಿತ್ ಶರ್ಮಾ ವಿಷಯದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ದ್ವಂದ್ವ ನಿಲುವು ಅನುಸರಿಸುತ್ತಿದೆ ಎಂದು ಕೊಹ್ಲಿ ಅಭಿಮಾನಿಗಳು ಆರೋಪಿಸಿದ್ದಾರೆ. ತಮ್ಮ ವೃತ್ತಿ ಜೀವನದ ಮೈಲಿಗಲ್ಲು 100ನೇ ಟೆಸ್ಟ್ ಪಂದ್ಯವನ್ನು ಬೆಂಗಳೂರಿನಲ್ಲಿ ಆಡಬೇಕು ಅನ್ನೋದು ವಿರಾಟ್ ಕೊಹ್ಲಿ ಜೊತೆಗೆ ಅವರ ಅಭಿಮಾನಿಗಳ ಆಸೆಯಾಗಿತ್ತು. ಇದಕ್ಕಾಗಿ ಬಿಸಿಸಿಐ ಪ್ರತ್ಯೇಕವಾದ ವ್ಯವಸ್ಥೆ ಮಾಡಲಿದೆ ಎಂದು ಎಲ್ಲರೂ ಆಶಿಸಿದ್ದರು. ಆದ್ರೆ ಈ ಮ್ಯಾಚ್ ವಿಚಾರವಾಗಿ ಕೊಹ್ಲಿ ಅಭಿಪ್ರಾಯವನ್ನು ಕೇಳದ ಬಿಸಿಸಿಐ, ಶಡ್ಯೂಲ್ ಪ್ರಕಾರ ಪಂದ್ಯವನ್ನು ಮೊಹಾಲಿಯನ್ನು ಆಯೋಜಿಸಿತ್ತು. ಇದು ಕೊಹ್ಲಿ ಮತ್ತು ಅವರ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಯಿತ್ತು.
ಇದಾದ ಬಳಿಕ ಕೊಹ್ಲಿ 100ನೇ ಟೆಸ್ಟ್ ಪಂದ್ಯಕ್ಕೆ ಮೊದಲು ಪ್ರೇಕ್ಷಕರಿಗೆ ಅವಕಾಶವಿಲ್ಲ ಎಂದು ಪ್ರಕಟಿಸಿತ್ತು. ಕೊನೆಯ ಕ್ಷಣದಲ್ಲಿ ಅಭಿಮಾನಿಗಳ ಒತ್ತಾಯದ ಮೇಲೆ ಶೇಕಡಾ 50 ರಷ್ಟು ಅಭಿಮಾನಿಗಳಿಗೆ ಅವಕಾಶ ನೀಡಿಲಾಯಿತ್ತು. ವಿರಾಟ್ ರ ನೂರನೇ ಟೆಸ್ಟ್ ಪಂದ್ಯಕ್ಕಾಗಿ ಕೊಂಚಯೂ ಕರುಣೆ ತೋರದ ಬಿಸಿಸಿಐ, ರೋಹಿತ್ ಶರ್ಮಾರ ನಾನೂರನೇ ಪಂದ್ಯಕ್ಕಾಗಿ ವಿಶೇಷ ಆಸಕ್ತಿಯನ್ನ ತೋರಿಸುತ್ತಿದೆ.
ನಿನ್ನೆಯವರೆಗೂ ಬೆಂಗಳೂರಿನ ಟೆಸ್ಟ್ ಮ್ಯಾಚ್ ಗೆ ಶೇಕಡಾ 50 ರಷ್ಟು ಸೀಟಿಂಗ್ ಗೆ ಅವಕಾಶ ನೀಡಲಾಗಿತ್ತು. ಆದ್ರೆ ಇದೀಗ 100ರಷ್ಟು ಸೀಟಿಂಗ್ ಗೆ ಅವಕಾಶ ಮಾಡಿಕೊಟ್ಟಿದೆ ಎಂದು ಕೊಹ್ಲಿ ಅಭಿಮಾನಿಗಳು ಟೀಕೆ ಮಾಡುತ್ತಿದ್ದಾರೆ. ಅಲ್ಲದೇ ಬಿಸಿಸಿಐ ಅನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದೆ. ರೋಹಿತ್ ವಿಚಾರದಲ್ಲಿ ನಡೆದುಕೊಳ್ಳುತ್ತಿದ್ದಂತೆ, ವಿರಾಟ್ ಕೊಹ್ಲಿ ವಿಚಾರದಲ್ಲೂ ನಡೆದುಕೊಂಡಿದ್ದರೇ ಚೆನ್ನಾಗಿತ್ತು ಎನ್ನುತ್ತಿದ್ದಾರೆ.
bcci-showing-dual-attitude-virat-kohli-and-rohit-sharma









