ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವತಿಯಿಂದ ನಗರ ಪ್ರದೇಶಗಳಲ್ಲಿ ಮನೆ/ ಫ್ಲಾಟ್ ಕೊಂಡುಕೊಳ್ಳಲು ಬಯಸುವವರಿಗೆ ಸಿಹಿಸುದ್ದಿ ನೀಡಿದೆ. ಎರಡು ಸ್ಥಳದಲ್ಲಿರುವ ಮನೆ/ ಫ್ಲಾಟ್‌ಗಳನ್ನು ಹಂಚಿಕೆ ಮಾಡಲು ಡಿಸೆಂಬರ್ 14ರಂದು ಬಿಡಿಎ ಫ್ಲಾಟ್ ಮೇಳ ಆಯೋಜನೆ ಮಾಡಿದೆ.ಕಣಿಮಿಣಿಕೆ ಮತ್ತು ತಿಪ್ಪಸಂದ್ರ ವಸತಿ ಯೋಜನೆಗಳಲ್ಲಿ ಲಭ್ಯವಿರುವ 2 ಮತ್ತು 3 ಬಿಹೆಚ್‌ಕೆ ಫ್ಲಾಟ್‌ಗಳನ್ನು ಹಂಚಿಕೆ ಮಾಡಲು ಈ ಮೇಳವನ್ನು ಆಯೋಜಿಸಲಾಗಿದೆ ಆಸಕ್ತಿಯಿರುವವರು, ಅಗತ್ಯ ದಾಖಲೆಗಳೊಂದಿಗೆ ಮೇಳದಲ್ಲಿ ಪಾಲ್ಗೊಂಡು ತಮ್ಮ ಸ್ವಂತ ಮನೆಯ ಕನಸನ್ನು ನನಸಾಗಿಸಿಕೊಳ್ಳಬಹುದು.
ಬಿಡಿಎ ಫ್ಲಾಟ್ ಮೇಳ – ಡಿಸೆಂಬರ್ 14, 2024
ಸ್ಥಳ: ಕಣಿಮಿಣಿಕೆ ವಸತಿ ಯೋಜನೆ ಕಾಂಪ್ಲೆಕ್ಸ್ ಬೆಂಗಳೂರು
ಸಮಯ: ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ
ವಿವರಗಳು:
ಫ್ಲಾಟ್‌ಗಳು: 2 BHK ಮತ್ತು 3 BHK ಫ್ಲಾಟ್‌ಗಳು ಲಭ್ಯವಿವೆ.
ಬ್ಯಾಂಕ್ ಸಾಲ: ಸ್ಥಳದಲ್ಲಿಯೇ ವಿವಿಧ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಲಭ್ಯವಿದೆ.
ನಿರ್ವಹಣಾ ಶುಲ್ಕ: ಫ್ಲಾಟ್‌ನ ಮಾರಾಟ ಮೊತ್ತದ ಮೇಲೆ ಶೇಕಡಾ 1 ರಷ್ಟು ಮುಂಗಡ ನಿರ್ವಹಣಾ ಶುಲ್ಕ ಕಡ್ಡಾಯವಾಗಿದೆ.
ಸೌಲಭ್ಯಗಳು: ಉದ್ಯಾನ, ಲಿಫ್ಟ್, ಈಜುಕೊಳ, ಕೊಳಚೆ ನೀರು ಸಂಸ್ಕರಣಾ ಘಟಕ, ವಿದ್ಯುತ್ ದೀಪ, ತ್ಯಾಜ್ಯ ವಿಲೇವಾರಿ.
ಮೇಳದ ಉದ್ದೇಶ: ಕಣಿಮಿಣಿಕೆ ಹಂತ-II, III ಮತ್ತು IV ರಲ್ಲಿ 1050 ಫ್ಲಾಟ್‌ಗಳಲ್ಲಿ ಸುಮಾರು 350 ಮಾರಾಟವಾಗಿವೆ. ಉಳಿದವುಗಳ ಮಾರಾಟಕ್ಕೆ ಈ ಮೇಳ ಹಮ್ಮಿಕೊಳ್ಳಲಾಗಿದೆ.