ಕಾರು ಚಲಾಯಿಸುವಾಗ ಗೂಗಲ್ ಮ್ಯಾಪ್ ನ ಕ್ರಮಬದ್ಧವಾಗಿ ಬಳಸದೇ ಹೋದ್ರೆ ದಂಡ ಗ್ಯಾರಂಟಿ..!
ಪ್ರಸ್ತುತ ಕಾಲಮಾನದಲ್ಲಿ ಸಾಮಾನ್ಯವಾಗಿ ಜನರು ಎಲ್ಲೇ ಗೊತ್ತಿಲ್ಲದ ಪ್ರದೆಶಗಳು ಹೊಸ ಮಾರ್ಗಗಳು ಜಾಗಗಳಿಗೆ ಹೋಗ್ಬೇಕಾದ್ರೂ ಗೂಗಲ್ ಮ್ಯಾಪ್ ಅತ್ಯವಶ್ಯಕ ಆಪ್ ಆಗಿದೆ. ಇನ್ ಫ್ಯಾಕ್ಟ್ ಬಹುಮುಖ್ಯವೂ ಆಗಿದೆ. ಹೀಗಿರೋವಾಗ ಸಾಮಾನ್ಯವಾಗಿ ಕಾರುಗಳಲ್ಲಿ , ಆಟೋಗಳಲ್ಲಿ ಚಲಿಸುತ್ತಾ ಚಾಲಕರು ಮೊಬೈಲ್ ನಲ್ಲಿ ಮ್ಯಾಪ್ ಆನ್ ಮಾಡಿ ಅದನ್ನ ಡಿಸ್ ಪ್ಲೇ ಮಾಡುತ್ತಾ ವಾಹನ ಚಲಾಯಿಸುವುದನ್ನ ನಾವು ನೋಡಿರುತ್ತೇವೆ. ಆದ್ರೆ ಇನ್ಮುಂದೆ ಆ ರೀತಿ ಏನಾದ್ರೂ ಮಾಡಿದ್ರೆ ದಂಡ ಬೀಳೋದು ಗ್ಯಾರಂಟಿ.
ಆಧಾರ್ ಕಾರ್ಡ್ ಅಪ್ ಡೇಟ್ ಮಾಡೋದಿದ್ಯಾ : ಹೇಗೆ..? ಇಲ್ಲಿದೆ ಮಾಹಿತಿ..!
ನೀವು ಕಾರಿನಲ್ಲಿ ಗೂಗಲ್ ಮ್ಯಾಪ್ ಬಳಕೆ ಮಾಡ್ತಿದ್ದು, ಕಾರಿನ ಡ್ಯಾಶ್ ಬೋರ್ಡ್ಗೆ ಮೊಬೈಲ್ ಹೋಲ್ಡರ್ ಹಾಕಿಲ್ಲವೆಂದ್ರೆ ಈಗ್ಲೇ ಹಾಕಿ. ಇಲ್ಲವೆಂದ್ರೆ ಟ್ರಾಫಿಕ್ ಪೊಲೀಸರಿಗೆ ದಂಡ ನೀಡಬೇಕಾಗುತ್ತದೆ. ಕೈನಲ್ಲಿ ಮೊಬೈಲ್ ಹಿಡಿದು ಮ್ಯಾಪ್ ನೋಡ್ತಾ ಹೋಗ್ತಿದ್ದರೆ ಅಪಘಾತವಾಗುವ ಸಾಧ್ಯತೆಯಿರುತ್ತದೆ. ಇದು ಸಂಚಾರಿ ನಿಯಮ ಉಲ್ಲಂಘನೆ ಮಾಡಿದಂತೆ. ಟ್ರಾಫಿಕ್ ಪೊಲೀಸರು 5 ಸಾವಿರ ರೂಪಾಯಿವರೆಗೆ ದಂಡ ವಿಧಿಸಬಹುದು. ಡ್ಯಾಶ್ ಬೋರ್ಡ್ ಗೆ ಮೊಬೈಲ್ ಹೋಲ್ಡರ್ ಹಾಕಿದ್ರೆ ಯಾವುದೇ ಸಮಸ್ಯೆ ಇರುವುದಿಲ್ಲ. ಈ ಎಲ್ಲಾ ಕ್ರಮಗಳನ್ನ ಅನುಸರಿಸಿದಲ್ಲಿ ನೀವು ದಂಡದಿಂದ ಬಚಾವಾಗಹುದಾಗಿದೆ.
WHATSAPP ನಲ್ಲಿ ಸೀಘ್ರವೇ ಬರಲಿದೆ ಈ ಹೊಸ ಆಪ್ಶನ್..! ಉಪಯೋಗವೇನು..!
ಆಧಾರ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್ : ಹೊಸ ಸೌಲಭ್ಯ ಒದಗಿಸಿದ UDPI